ಬೆಂಗಳೂರು: ಬ್ರಾಂಡೆಡ್ ವಾಚ್ಗಳಿದ್ದ ಲಾರಿಯನ್ನೇ ಹೈಜಾಕ್ ಮಾಡಿದ್ದ ಖದೀಮರನ್ನ ಅರೆಸ್ಟ್ ಮಾಡಲಾಗಿದ್ದು, 57 ಲಕ್ಷ ಮೌಲ್ಯದ 1282 ವಾಚ್ಗಳು ವಶಕ್ಕೆ ಪಡೆಯಲಾಗಿದೆ.
ಟೈಟಾನ್,ಫಾಸ್ಟ್ ಟ್ರ್ಯಾಕ್ ಸ್ಮಾರ್ಟ್ ವಾಚ್ಗಳನ್ನ ವಶಕ್ಕೆ ಪಡೆಯಲಾಗಿದೆ. ಖದೀಮರು ವಾಚ್ ಗಳಿದ್ದ ಅಶೋಕ್ ಲೈಲಾಂಡ್ ಲಾರಿಯನ್ನೆ ಹೊತ್ತೊಯ್ದಿದ್ದರು. ಜೈದೀಪ್ ಎಂಟರ್ ಪ್ರೈಸಸ್ ಎಂಬ ಕೊರಿಯರ್ ಮ್ಯಾನೇಜರ್ ಆಗಿರುವ ಜವೃಎಗೌಡ ಎಂಬುವವರ ನೀಡಿದ ದೂರಿನನ್ವಯ ಜಮೀರ್ ಅಹಮ್ಮದ್,ಶಾಹಿದ್ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ.
ಬಂಧಿತರಿಂದ 57 ಲಕ್ಷ ಮೌಲ್ಯದ 1282 ವಾಚ್ ಗಳು ವಶಕ್ಕೆ ಪಡೆಯಲಾಗಿದ್ದು, ಜನವರಿ 15 ರ ರಾತ್ರಿ ಆರ್.ಆರ್.ನಗರದಲ್ಲಿ ಈ ಘಟನೆ ನಡೆದಿದೆ. ಸೈಯದ್ ಶಾಹಿದ್ ಮತ್ತು ಜಮೀರ್ ಅಹಮ್ಮದ್ ಬೈಕ್ ಲಾರಿಗೆ ಡಿಕ್ಕಿಯಾಗಿದೆ, ಗಲಾಟೆಯಾಗಿ ಆರೋಪಿಗಳು ಲಾರಿ ಫಾಲೋ ಮಾಡಿದ್ದರು, ನಂತರ ಜಾನ್ ಮತ್ತು ಬಿಸಾಲ್ ಎಂಬಿಬ್ಬರ ಮೇಲೆ ಹಲ್ಲೆ ನಡೆಸಿದ್ರು. ಹಲ್ಲೆ ನಡೆಸಿದ ಹಿನ್ನಲೆ ಬಿಸಾಲ್ ಹಾಗು ಜಾನ್ ಹೆದರಿ ಓಡಿಹೋಗಿದ್ದರು.
ಈ ವೇಳೆ ಲಾರಿಯನ್ನೆ ಹೈಜಾಕ್ ಮಾಡಿಕೊಂಡು ಹೋಗಿದ್ದರು, ನಂತರ ಲಾರಿಯಲ್ಲಿದ್ದ 1282 ವಾಚ್ ಗಳನ್ನು ಬಾಪೂಜಿನಗರ ಗೋಡೌನ್ ನಲ್ಲಿ ಇಳಿಸಿಕೊಂಡಿದ್ದರು, ನಂತರ ಲಾರಿಯನ್ನ ಅದೇ ಜಾಗದಲ್ಲಿ ಬಿಟ್ಟು ಹೋಗಿದ್ರು. ಘಟನೆ ಸಂಬಂಧ ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.ದೂರು ದಾಖಲಿಸಿಕೊಂಡ ಪೊಲೀಸರಿಂದ ಆರೋಪಿಗಳನ್ನ ಬಂಧಿಸಲಾಗಿದೆ.