ಮಂಡ್ಯ : ಮಂಡ್ಯ ಜಿಲ್ಲೆಯಲ್ಲಿ ಕಮಲ ಅರಳಿಸಲು ಟಾಸ್ಕ್ ನೀಡಲಾಗಿದೆ, ಸರ್ಕಾರ ನೂತನ ಜಿಲ್ಲಾ ಉಸ್ತುವಾರಿಯಾಗಿ ನನ್ನನ್ನು ನೇಮಿಸಿದೆ ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಈ ಬಗ್ಗೆ ಮಂಡ್ಯದಲ್ಲಿ ಆರ್.ಅಶೋಕ್ ಮಾತನಾಡಿ, ಕಳೆದ ಬಾರಿ ನಾನು ಉಸ್ತುವಾರಿಯಾಗಿದ್ದಾಗ ಸಾಕಷ್ಟು ಗ್ರಾ.ಪಂ.ಯ ಅಧಿಕಾರ ಹಿಡಿದ್ದಿದ್ದೆವು, ಈ ಬಾರಿ ಟ್ರಯಲ್ ನೋಡಲ್ಲ, ಜಿಲ್ಲೆಯಲ್ಲಿ 4-5 ಕ್ಷೇತ್ರ ಗೆದ್ದೆ ಗೆಲ್ಲಬೇಕಂಬ ಪಣ ನಮ್ಮದು. ಮುಂದಿನ ತಿಂಗಳು ಮಂಡ್ಯ ಜಿಲ್ಲೆಗೆ ಮೋದಿ ಕರೆಸಿ ಸಭೆ ಮಾಡಿಸಲು ಯೋಚಿಸಿದ್ದೇವೆ, ನೂತನ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಉಧ್ಘಾಟನೆ ದಿನ ಮೋದಿ ಬರ್ತಾರೆ. ಈಗಾಗಲೇ ಈ ಬಗ್ಗೆ ಸಂಬಂಧಿಸಿದ ಸಚಿವರ ಜೊತೆ ಮಾತುಕತೆ ಆಗಿದೆ, ಈ ಬಾರಿ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಪರ ಒಲವಿದೆ, ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ಬಲ ತುಂಬಲು ಬಂದಿದ್ದೇನೆ. ಸಂಸದೆ ಸುಮಲತಾ ಪಕ್ಷಕ್ಕೆ ಬರುವ ವಿಚಾರ ಈಗಾಗಲೇ ಈ ಬಗ್ಗೆ ಮಾತುಕತೆ ಆಗಿದೆ, ಅವ್ರು ಕೂಡ ನಮ್ಮ ಸಂಪರ್ಕದಲ್ಲಿ ಇದ್ದಾರೆ ನಿರ್ಧಾರ ಅವರಿಗೆ ಬಿಟ್ಟಿದ್ದು. ಬಿಜೆಪಿ ಪಕ್ಷದ ವಿರುದ್ದ ದೂರು ವಿಚಾರ, ಭ್ರಷ್ಟಾಚಾರ ಎಸಗಿದವರು ಈ ಬಗ್ಗೆ ಮಾತನಾಡೋ ನೈತಿಕತೆ ಇಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಸಕ್ಕರೆನಾಡು ಮಂಡ್ಯದಲ್ಲಿ ರಂಗೇರಿದ ರಾಜಕೀಯ ಅಖಾಡ… ಜಿಲ್ಲಾ ಉಸ್ತುವಾರಿಯಾಗುತ್ತಿದ್ದಂತೆ ಪಕ್ಷ ಸಂಘಟನೆಗೆ ಮುಂದಾದ ಸಚಿವ ಆರ್ ಅಶೋಕ್….