ಕಲಬುರಗಿ : ಆರ್.ಡಿ.ಪಾಟೀಲ್ ವಿಡಿಯೋ ಬೆನ್ನಲ್ಲೇ ಆಡಿಯೋ ಸ್ಫೋಟವಾಗಿದ್ದು, R.D ಪಾಟೀಲ್ ಬೆಂಬಲಿಗರು ಮೂರು ಆಡಿಯೋ ರಿಲೀಸ್ ಮಾಡಿದ್ದಾರೆ. PSI ಪರೀಕ್ಷೆ ಅಕ್ರಮ ಕೇಸ್ ಕಿಂಗ್ಪಿನ್ ರುದ್ರಗೌಡ ಪಾಟೀಲ್ , ಸಿಐಡಿ DySP ಶಂಕರಗೌಡ ಜೊತೆ ಮಾತ್ನಾಡಿದ್ದಾರೆ ಎನ್ನಲಾದ ಆಡಿಯೋ ಆಗಿದೆ.
ಆರ್ಡಿ ಪಾಟೀಲ್ ಪ್ರಕರಣದಲ್ಲಿ ಸಹಾಯ ಮಾಡಲು ಹಣದ ಆಫರ್ ಮಾಡಿದ್ದಾನೆ. ರುದ್ರಗೌಡ ಬೇಗ ಚಾರ್ಜ್ಶೀಟ್ ಸಲ್ಲಿಕೆ ಮಾಡುವಂತೆ ಹಣದ ಆಫರ್ ನೀಡಿದ್ದಾನೆ. DySP ಶಂಕರಗೌಡ ಪಾಟೀಲ್ ಬಳಿ ಹೇಳಿರೋ ರುದ್ರಗೌಡ ಪಾಟೀಲ್ ನನಗೆ ರೊಕ್ಕ ಇಂಪಾರ್ಟೆಂಟ್ ಅಲ್ಲಾ..ಕೆಲಸ ಇಂಪಾರ್ಟೆಂಟ್ ಎಂದು ಹೇಳಿದ್ದಾನೆ.
ರುದ್ರಗೌಡ ನೀವು ಯಾರಿಗೆ ಹೇಳ್ತಿರೋ ಅವರಿಗೆ ದುಡ್ಡು ಕೊಡ್ತೇನೆ, ಏನ ಮಾಡ್ತೀರಿ ಮಾಡಿ ಮುಗುಸ್ರಿ.. ಒಟ್ನಲ್ಲಿ ಕೆಲಸ ಆಗ್ಬೇಕು. ನಾಳೆ ಅಥವಾ ನಾಡಿದ್ದು ಪೇಮೆಂಟ್ ಕಳಿಸುವೆ ಎಂದಿದ್ದು, ಈಗ 1 ಕೋಟಿ.. ಆಮೇಲೆ ಇನ್ನೊಂದು ಕೋಟಿ ಕೊಡ್ತೀನಿ. ಇಂಥಾ ಚಾನ್ಸ್ ನಿಮಗೆ ಎಲ್ಲಿ ಬಂದೀತು ಹೇಳ್ರಿ ಎಂದಿರೋ ಆರ್ಡಿಪಿ, ಅದಕ್ಕೆ ಶಂಕರಗೌಡ ರೊಕ್ಕ ಮಾಡ್ಕೋದಾದ್ರೆ ಯಾವಾಗ್ಲೋ ಮಾಡ್ಕೋತ್ತಿದ್ದೆ ಎಂದಿದ್ದಾರೆ. ತನಿಖಾಧಿಕಾರಿ ಕೇಸ್ ಕ್ಲೋಸ್ ಮಾಡೋ ಬಗ್ಗೆ ಮಾತನಾಡಿದ್ದಾರೆ. ಈ ಮೂರು ಆಡಿಯೋ PSI ಕೇಸ್ಗೆ ಬಾರೀ ಟ್ವಿಸ್ಟ್ ನೀಡುತ್ತಾ.
ಇದನ್ನೂ ಓದಿ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ.. ಮೂರನೇ ದಿನಕ್ಕೆ ಕಾಲಿಟ್ಟ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಪ್ರೊಟೆಸ್ಟ್…