ಬೆಂಗಳೂರು : ಟ್ರಾಫಿಕ್ ರೂಲ್ಸ್ ಗಳು ಈಗ ಕಠಿಣವಾಗುತ್ತಾ ಹೋಗುತ್ತಲಿದ್ದು, ಆಟೋ ಮೇಟಿಕ್ ನಂಬರ್ ಪ್ಲೇಟ್ ರೆಕಾಗ್ನೈಝ್ (ANPR) ಕೂಡ ಈಗ ನಗರದ ರಸ್ತೆಗಳಲ್ಲಿ ಕಾರ್ಯಾಚರಣೆಗಿಳಿದಿದೆ.
ರೆಕಾಗ್ನೈಝ್ ಕ್ಯಾಮರಾ ಕಣ್ಣಿಗೆ ಸಿಕ್ಕಿ ಬಿದ್ದರೆ ಕ್ಷಣಾರ್ಧದಲ್ಲಿ ಪೊಲೀಸರ ಮೊಬೈಲ್ ಗೆ ಮೆಸೇಜ್ ಬರುತ್ತೆ. ಆದ್ರೆ ಆ ಕ್ಯಾಮರಾ ಕಣ್ಣಿಗೆ ಸರ್ಕಾರಿ ವಾಹನಗಳು ಮಾತ್ರ ಬೀಳೋದೇ ಇಲ್ಲ. ಅವರಿಗೆ ಫೈನ್ ಕಟ್ಟುವಂತೆ ಸೂಚನೆಯೂ ನೀಡಲ್ಲ.
ಸರ್ಕಾರಿ ವಾಹನ ಸವಾರರಿಗೆ ಮಾತ್ರ ಸಾಫ್ಟ್ ಕಾರ್ನರ್ ತೋರಿಸುತ್ತಿದ್ದಾರೆ. ಸಚಿವರೊಬ್ಬರ ವಾಹನ KA-02-GA 5555 ಮೇಲೆ 2000 ಫೈನ್ ಇದೆ. ಗೌರ್ವನ್ಮೆಂಟ್ ಆಫ್ ಕರ್ನಾಟಕ ಎಂದು ಬರೆದಿರುವ ಹಿನ್ನಲೆ ಫೈನ್ ಇದ್ದರೂ ಪೊಲೀಸರು ಸೈಲೆಂಟ್ ಆಗಿದ್ದಾರೆ.
KA-04-GA-1 ಇನ್ನೋವಾ ಕಾರಿನ ಮೇಲೆ ಕೂಡ 4000 ಸಾವಿರ ಫೈನ್ ಇದೆ. ಪೊಲೀಸ್ ಡಿಪಾರ್ಟ್ಮೆಂಟ್ಗೆ ನೀಡಿದ ವಾಹನ ಕೂಡ ಕಾನೂನು ಉಲ್ಲಂಘನೆ ಮಾಡಿದೆ. KA-50-GA 0001 ನಂಬರಿನ ಇನ್ನೋವಾ ಕಾರಿನ ಮೇಲಿದೆ 900 ರೂಪಾಯಿ ಫೈನ್ ಇದೆ. ಸಂಚಾರಿ ಇಲಾಖೆ ಈಗಲಾದರೂ ಕ್ರಮ ಕೈಗೊಳ್ಳಬೇಕಿದೆ.