ಬೆಂಗಳೂರು : ಸಾಹುಕಾರ್ ಈ ವಿಡಿಯೋ ಬಿಜೆಪಿಗೆ ಸಂಕಷ್ಟ ತಂದಿಟ್ಟಿದ್ದು, ಹಣದ ಆಮಿಷ ನೀಡಿದ್ದಕ್ಕೆ ಕಾಂಗ್ರೆಸ್ನಿಂದ ಕಂಪ್ಲೇಂಟ್ ಕೊಡಲಾಗಿದೆ. ಬಿಜೆಪಿ 30 ಸಾವಿರ ಕೋಟಿ ಹಂಚಲು ಹೊರಟಿದೆ, ವೋಟಿಗೆ 6000 ಕೊಡ್ತೀವಿ ಅಂತಾ ಜಾರಕಿಹೊಳಿ ಒಪ್ಪಿಕೊಂಡಿದ್ದಾರೆ. ತನಿಖೆ ಮಾಡಿ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಆಗ್ರಹಿಸಿದ್ದು, ಜಾರಕಿಹೊಳಿ ವಿರುದ್ಧ FIR ದಾಖಲಿಸುವಂತೆ ಕಾಂಗ್ರೆಸ್ ದೂರು ನೀಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ರಮೇಶ್ ಜಾರಕಿಹೊಳಿ ಹಣದ ಹೇಳಿಕೆ ನೀಡಿದ್ದರು. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯಾಧ್ಯಕ್ಷ ಕಟೀಲ್ ,
ಸಿಎಂ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರ ಮೇಲೆ ದೂರು ನೀಡಿದ್ದಾರೆ. ಸೆಕ್ಷನ್ 171B ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಿದ್ದು, ಜನಪ್ರತಿನಿಧಿ ಕಾಯ್ದೆ-1951ರ 123(1) ಅಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ. 6000 ಕೊಟ್ಟು ಮತದಾರರನ್ನು ಕೊಂಡುಕೊಳ್ಳಲು ಹೊರಟಿದ್ದಾರೆ. ಇವರ ಮೇಲೆ ಕೇಸ್ ದಾಖಲಿಸಿ ಕ್ರಮ ಜರುಗಿಸಿ ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ. ನಾವು ಕೊಟ್ಟ ದೂರಿನಡಿ ಕ್ರಮ ಕೈಗೊಳ್ಳಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ : “ಡ್ಯಾಶ್” ಹಾಡಿನ ಮೂಲಕ ಕೋಟಿ ಜನರ ಮನಸೆಳೆದ “ಸೂತ್ರಧಾರಿ”