ಬೆಂಗಳೂರು : ಕಂದಾಯ ಸಚಿವ ಆರ್.ಅಶೋಕ್ ಮಾದರಿ ಗ್ರಾಮ ವಾಸ್ತವ್ಯ ಮಾಡಲಿದ್ದು, ಇದೇ ಮೊದಲ ಬಾರಿ ದಟ್ಟಕಾಡಿನ ಮಧ್ಯೆ ಇರುವ ಗ್ರಾಮದಲ್ಲಿ ವಾಸ್ತವ್ಯ ಇದಾಗಿದೆ. ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಕೆಂಚನಹಳ್ಳಿಗೆ ಇಂದು ಆರ್.ಅಶೋಕ್ ಭೇಟಿ ನೀಡಿದ್ದಾರೆ.
ಕಂದಾಯ ಸಚಿವ ಆರ್.ಅಶೋಕ್ ಇಂದು ಮತ್ತು ನಾಳೆ ಗ್ರಾಮ ವಾಸ್ತವ್ಯ ನಡೆಯಲಿದೆ. ನಾಗರಹೊಳೆ ಅಭಯಾರಣ್ಯದ ನಡುವೆ ಇರುವ ಕೆಂಚನಹಳ್ಳಿ ಕಾಡಿನಲ್ಲಿರುವ ಗ್ರಾಮಸ್ಥರ ಸಮಸ್ಯೆಯನ್ನು ಕಂದಾಯ ಸಚಿವ ಆಲಿಸಲಿದ್ದಾರೆ. ಅರಣ್ಯ ಮತ್ತು ಕಂದಾಯ ಭೂಮಿ ವಿವಾದದ ಬಗ್ಗೆ ಕಂದಾಯ ಸಚಿವರು ಖುದ್ದಾಗಿ ಪರಿಶೀಲನೆ ನಡೆಸಲಿದ್ದಾರೆ. ಆನೆ ತುಳಿತ ಸೇರಿ ಅರಣ್ಯದಿಂದ ಆಗುವ ಸಂಕಷ್ಟಗಳ ಬಗ್ಗೆ ಅಹವಾಲು ಸ್ವೀಕಾರವಾಗಲಿದೆ. ಅಶೋಕ್ ಅವರು ಗ್ರಾಮಸ್ಥರಿಂದ ನೇರ ಅಹವಾಲು ಸ್ವೀಕಾರ ಮತ್ತು ಚರ್ಚೆ ನಡೆಸಲು ಸತತ ಎರಡು ದಿನಗಳ ಕಾಲ ಕಾಡಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಈಗಾಗಲೇ ಅಶೋಕ್ ಅವರ ಗ್ರಾಮ ವಾಸ್ತವ್ಯ ರಾಜ್ಯದ ಎಲ್ಲೆಡೆ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ :ಬ್ರಾಹ್ಮಣರನ್ನು ಅವಹೇಳನ ಮಾಡಿದ ವಿಚಾರ.. ಸಿದ್ದು ಆಪ್ತ ಪ.ಮಲ್ಲೇಶ್ ವಿರುದ್ಧ ದೂರು ನೀಡಿದ ಬ್ರಾಹ್ಮಣ ಸಮುದಾಯ…