ವಾಷಿಂಗ್ಟನ್ : ಅಲ್ ಖೈದಾ ಉಗ್ರ ಅಲ್ ಝವಾಹಿರಿ ಫಿನಿಶ್ ಆಗಿದ್ದು, ಅಮೆರಿಕ ಡ್ರೋನ್ ಅಟ್ಯಾಕ್ ನಲ್ಲಿ ಉಗ್ರ ಮಟಾಶ್ ಮಾಡಲಾಗಿದೆ. 9/11 ದಾಳಿಯ ರೂವಾರಿ ಅಲ್ ಝವಾಹಿರಿ ಬಲಿಯಾಗಿದ್ಧಾನೆ. ಈ ರೀತಿ ಆಲ್ ಝವಾಹಿರಿ ಹತ್ಯೆಯಾದ ಸುದ್ದಿ ಬರ್ತಾ ಇರೋದು ಇದು ಮೂರನೇ ಬಾರಿ !
ಅಮೆರಿಕ ಅಫ್ಘಾನಿಸ್ತಾನದಲ್ಲಿ ಡ್ರೋನ್ ದಾಳಿ ಮಾಡಿದ್ದು, ಅಲ್‌ಖೈದಾ ಉಗ್ರ ಸಂಘಟನೆ ಮುಖ್ಯಸ್ಥ ಆಯ್ಮಾನ್ ಅಲ್ ಝವಾಹಿರಿ ಬಲಿಯಾಗಿದ್ಧಾನೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಅಧಿಕೃತ ಘೋಷಣೆ ಮಾಡಿದ್ಧಾರೆ. ಆಯ್ಮಾನ್ ಅಲ್ ಝವಾಹಿರಿ ಮೋಸ್ಟ್ ವಾಂಟೆಡ್ ಉಗ್ರನಾಗಿದ್ದನು. 2001ರಲ್ಲಿ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ದಾಳಿ ಮಾಡಿಸಿದ್ದ. ಆ ಬಳಿಕ ಆಲ್ ಜವಾಹಿರಿ ಸತ್ತು ಹೋಗಿದ್ದ ಎಂದು ಸುದ್ದಿಯಾಗಿತ್ತು. ಆದರೆ ಅದೊಮ್ಮೆ ದಿಢೀರ್ ಪ್ರತ್ಯಕ್ಷನಾಗಿದ್ದ. ಆ ನಂತರ ಮತ್ತೆ ಈತ ಸತ್ತಿದ್ದ ಎಂದು ಸುದ್ದಿಯಾಗಿತ್ತು. ಆಲ್ ಜವಾಹಿರಿ ಬದುಕಿಲ್ಲ ಎಂದೇ ಅಮೇರಿಕಾ ಸೇರಿದಂತೆ ಎಲ್ಲಾ ರಾಷ್ಟ್ರಗಳು ನಿರ್ಧರಿಸಿದ್ದವು. ಆದರೆ ಮಂಡ್ಯದ ಮಸ್ಕಾನ್ ಎಂಬ ವಿದ್ಯಾರ್ಥಿನಿ ಬುರ್ಕಾ ವಿರೋಧಿಗಳ ಎದುರು ಅಲ್ಲಾಹು ಅಕ್ಬರ್ ಎಂದು ಘೋಷಣೆ ಮಾಡಿದ್ದನ್ನು ಪ್ರಸಂಶಿಸಲು ಆಲ್ ಜವಾಹಿರಿ ಲೈವ್ ಬಂದಿದ್ದ. ಆಗಲೇ ಆಲ್ ಜವಾಹಿರಿ ಬದುಕಿದ್ದಾನೆ ಎಂದು ವಿಶ್ವಕ್ಕೆ ತಿಳಿಯಿತು.
ಇದೀಗ ಝವಾಹಿರಿ ಕಾಬೂಲ್‌ನ ನಿವಾಸದ ಬಾಲ್ಕನಿಯಲ್ಲಿ ಅಡಗಿದ್ದ, ಅಮೆರಿಕ ಡ್ರೋನ್ ದಾಳಿಯ ಮೂಲಕ ಹತ್ಯೆ ಮಾಡಿದೆ. ಅಮೆರಿಕ ಪಡೆಗಳಿಂದ ಡ್ರೋನ್ ದಾಳಿ ನಡೆದಿದೆ. ಮೂಲತಃ ಈಜಿಪ್ಟ್‌ನ ಝವಾಹಿರಿ ಕೈರೊದಲ್ಲಿ ಬಾಲ್ಯ ಕಳೆದಿದ್ದ, ವೃತ್ತಿಯಲ್ಲಿ ಶಸ್ತ್ರಚಿಕಿತ್ಸಕನಾಗಿದ್ದ ಆತ ಉಗ್ರನಾಗಿದ್ದ. ಹಿಂಸಾತ್ಮಕ ಮೂಲಭೂತವಾದದಲ್ಲಿ ತೊಡಗಿಕೊಂಡಿದ್ದ. 2001ರ ಸೆಪ್ಟೆಂಬರ್ 11ರ ದಾಳಿ ಬಳಿಕ ತಲೆಮರೆಸಿಕೊಂಡಿದ್ದ, ಒಸಾಮಾ ಬಿನ್ ಲಾಡೆನ್ ನಂತರ ಅಲ್‌ಖೈದಾ ಮುಖ್ಯಸ್ಥನಾಗಿದ್ದನು. ಅಮೆರಿಕ ಝವಾಹಿರಿ ತಲೆಗೆ 2.5 ಕೋಟಿ ಡಾಲರ್ ಬಹುಮಾನ ಘೋಷಿಸಿತ್ತು.
ಇದನ್ನೂ ಓದಿ : ಶಾಸಕ ಜಮೀರ್ ಮನೆ ಮೇಲೆ ಎಸಿಬಿ ದಾಳಿ ಪ್ರಕರಣ… ವಿಚಾರಣೆಗೆ ಹಾಜರಾಗುವಂತೆ ಎಸಿಬಿ ನೋಟಿಸ್…!