ರಿಷಬ್ ಪಂತ್ ಏರ್ಲಿಫ್ಟ್ಗೆ ಚಿಂತನೆ ನಡೆಸಿದೆ. ಡೆಹ್ರಾಡೂನ್ನಿಂದ ದೆಹಲಿಗೆ ಸ್ಥಳಾಂತರ ಸಾಧ್ಯತೆಯಿದೆ. ಡಿಡಿಸಿಎ ಪದಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ದೆಹಲಿ ಕ್ರಿಕೆಟ್ ಬೋರ್ಡ್ ಪಂತ್ ಆರೋಗ್ಯ ವಿಚಾರಿಸಿದ್ದಾರೆ.
ಡಾಕ್ಟರ್ ಸಲಹೆ ಮೇಲೆ ಏರ್ಲಿಫ್ಟ್ ಮಾಡಲು ಚಿಂತನೆ ನಡೆಸಿದೆ. MRI ಸ್ಕ್ಯಾನ್ ಮಾಡಿದ ನಂತರ ವೈದ್ಯರ ಸಲಹೆ ಪಡೆಯಬೇಕಿದೆ. ಪಂತ್ ಚೇತರಿಕೆಗೆ ಕನಿಷ್ಟವೆಂದರೂ 6 ತಿಂಗಳು ಬೇಕು ಎಂದಿದ್ದಾರೆ. ರಿಷಬ್ ಪಂತ್ ಕಾರ್ ಡ್ರೈವ್ ಮಾಡ್ತಿದ್ದಾಗ ತೂಕಡಿಸಿದ್ದು, ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಕಾರ್ ಬಿದ್ದಿದೆ. ಕೂಡಲೇ ಬಸ್ ಡ್ರೈವರ್, ಕಂಡಕ್ಟರ್ ಗಮನಿಸಿ ಸಹಾಯಕ್ಕೆ ಬಂದಿದ್ದಾರೆ. ರಿಷಬ್ ರಕ್ಷಣೆ ಮಾಡಿದ ಡ್ರೈವರ್, ಕಂಡಕ್ಟರ್ಗೆ ಸನ್ಮಾನ ಮಾಡಲಾಗಿದೆ.
ಇದನ್ನೂ ಓದಿ : ನ್ಯೂ ಇಯರ್ ಪಾರ್ಟಿಗೆ ನಂದಿ, ಚಾಮುಂಡಿ ಸೇರಿ ಹಲವು ಬೆಟ್ಟಗಳಿಗೆ ಪ್ರವೇಶ ನಿರ್ಬಂಧ…