ವಿಜಯಪುರ: RSS, ಬಿಜೆಪಿ ಸರ್ಕಾರದ ವಿರುದ್ಧ HDK ವಾಗ್ದಾಳಿ ನಡೆಸಿದ್ದು, RSS ಬರೋದಕ್ಕೂ ಮುಂಚೆ ದೇಶದಲ್ಲಿ ಸಂಸ್ಕೃತಿ ಇರಲಿಲ್ವ, ಸಂಸ್ಕೃತಿಯನ್ನ ಜನತೆ ಉಳಿಸಿರಲಿಲ್ವಾ,ಆರ್ಎಸ್ಎಸ್ನವರು ಯಾವ ಸಂಸ್ಕೃತಿ ಉಳಿಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ವಿಜಯಪುರದಲ್ಲಿ ಗುಡುಗಿದ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ, ಧರ್ಮದ ಹೆಸರಿನಲ್ಲಿ ಪಠ್ಯದ ಗೊಂದಲ ಸೃಷ್ಟಿಸುತ್ತಿದ್ದಾರೆ, ಇವರಿಂದ ನಾವು ಸಂಸ್ಕೃತಿ ಕಲಿಯಬೇಕಿಲ್ಲ. ಸರ್ಕಾರ ನಡೆಸುವವರು ಕೈಯಿಂದ ಬಾಚುತ್ತಿಲ್ಲ, ಹಿಟಾಚಿಯಿಂದ ಸರ್ಕಾರದ ಸಂಪತ್ತನ್ನು ಬಗೆಯುತ್ತಿದ್ದಾರೆ. ಇದು ಆರ್‌ಎಸ್ಎಸ್ ಸಂಸ್ಕೃತಿನಾ..?ಇದನ್ನೇ ಆರ್‌ಎಸ್ಎಸ್ ಕಲಿಸ್ತಿರೋದಾ..? ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ:300 ರೂಗಾಗಿ ಆಟೋ ಡ್ರೈವರ್ ಕೊಲೆ… ಗೋಳಗುಮ್ಮಟ ಠಾಣೆ ಪೊಲೀಸರಿಂದ ಆರೋಪಿ ಬಂಧನ…