ಬೆಂಗಳೂರು: ಮಹಾನಗರ ಪಾಲಿಕೆಗಳ ಫಲಿತಾಂಶಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್ ಅವರು ಕಾಂಗ್ರೆಸ್ ನವರು ಬಿಜೆಪಿ ರಾಜಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಮಾತನಾಡಿದ ಬಗ್ಗೆ ಹೇಳಿಕೆ ನೀಡಿದ್ಧಾರೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಒಂದೇ ಮನೆತನದ ಅಜ್ಜ, ಮೊಮ್ಮಗ, ಮೊಮ್ಮಗಳ ಗೆಲುವು…!
ಬಿಜೆಪಿ ರಾಜಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬಗ್ಗೆ ವಿರೋಧ ಪಕ್ಷದವರು ಆಗಾಗ್ಗೆ ಟೀಕೆ ಮಾಡುತ್ತಿದ್ದ ಬಗ್ಗೆ ಮಾತನಾಡಿದ ಸಚಿವ ಆರ್ ಅಶೋಕ್, ಕಟೀಲ್ ಅವರು 3ಬಾರಿಗಿಂತ ಹೆಚ್ಚು ಲೋಕಸಭಾ ಸದಸ್ಯರಾಗಿದ್ದಾರೆ. ಎರಡುವರೇ ವರ್ಷದಲ್ಲಿ 6 ಬಾರಿ ಇಡೀ ಕರ್ನಾಟಕನ್ನು ಸುತ್ತಿ ಬಂದಿದ್ದಾರೆ.
ಇದನ್ನೂ ಓದಿ: ಮದುವೆ ಬಳಿಕ ವಿಶೇಷ ಗಿಷ್ಟ್ ಕೊಟ್ಟ ಚಂದನ್ ಶೆಟ್ಟಿ… ಫಸ್ಟ್ ಟೈಂ ಖುಷಿಯಿಂದ ಅತ್ತ ನಿವೇದಿತಾ ಗೌಡ..
ದೇಶದಲ್ಲಿ ಕಾಂಗ್ರೆಸ್ ಈಗಾಗಲೇ ನಿರ್ನಾಮವಾಗಿದೆ ಕರ್ನಾಟಕದಿಂದಲೂ ನಿರ್ಣಾಮವಂತಹ ಸ್ಪಷ್ಟ ಸೂಚನೆಯನ್ನು ಈ ಚುಣಾವಣೆ ಮೂಲಕ ಜನರು ಕೊಟ್ಟಿದ್ದಾರೆ. ಸಣ್ಣ ಸಣ್ಣ ಪದಗಳನ್ನು ಉಪಯೋಗಿಸುವುದರಿಂದ ನಿಮ್ಮ ಗೌರವಕ್ಕೆ ಧಕ್ಕೆ ಬರುತ್ತೆ, ಆದ್ರೆ ಕಟೀಲ್ ಅವರ ಗೌರವ ಹೆಚ್ಚಾಗುತ್ತೆ ಎಂದು ಹೇಳಿದ್ಧಾರೆ. ಹೆಸರೇ ಇಲ್ಲದ ನಿಮ್ಮ ಪಕ್ಷಕ್ಕೆ, ರಾಷ್ಟ್ರದಲ್ಲಿ ವಿರೋಧ ಪಕ್ಷ ಆಗೋಕು ನಾಲಾಯಕ್ಕಾದ ಪಕ್ಷ ನಿಮ್ಮದು. ಅಂತವರು ನಮ್ಮ ಬಿಜೆಪಿ ರಾಷ್ಟ್ರೀಯ ಪಕ್ಷದ ಅಧ್ಯಕ್ಷರ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ, ನಿಮ್ಮ ಬಗ್ಗೆ ಟೀಕೆ ಮಾಡಲೂ ನನಗೆ ಬೇಸರವಾಗುತ್ತಿದೆ ಎಂದು ಸಚಿವ ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ.