ರಾಮನಗರ : ರಾಮನಗರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಕಳವಾಗಿದೆ. 2000 ಪ್ರತಿಗಳಿದ್ದ ಪರ್ಮಿಟ್ ಬಾಕ್ಸ್ ನಾಪತ್ತೆಯಾಗಿದೆ.
ಒಟ್ಟು 13 ಪರ್ಮಿಟ್ ಬಾಕ್ಸ್ನಲ್ಲಿ ಒಂದು ಬಾಕ್ಸ್ ಕಳವಾಗಿದ್ದು, ಕಚೇರಿ ಕೊತ್ತಿಪುರದ ಜನನಿಬಿಡ ಪ್ರದೇಶದಲ್ಲಿದೆ. ಅಧಿಕಾರಿ, ಸಿಬ್ಬಂದಿ ನಿರ್ಲಕ್ಷ್ಯದಿಂದ ಭಾರೀ ಯಡವಟ್ಟಾಗಿದ್ದು, ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಮೇಲೆ ಡೌಟು..?
ರಾಮನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜನವರಿ 15ರಂದು ಬೆಳಗ್ಗೆ 7 ಗಂಟೆ ಸುಮಾರಿನಲ್ಲಿ ಕಳವಾಗಿದ್ದು, ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಚೇರಿಯಲ್ಲೇ ಕಳವಾಗಿದೆ. ಉಪನಿರ್ದೇಶಕ ಲೋಕೇಶ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಒಂದು ಬಾಕ್ಸ್ನಲ್ಲಿ ಕನಿಷ್ಟ 2000 ಪರ್ಮಿಟ್ ಬಾಕ್ಸ್ ಇರಲಿದ್ದು, ಖನಿಜ ಸಾಗಣೆಯ ಪರ್ಮಿಟ್ ಪತ್ರಗಳಿರುವ ಬಾಕ್ಸ್ಗಳ ಕಳವಾಗಿದೆ. ಪರ್ಮಿಟ್ ಬಾಕ್ಸ್ ಕಳವು ಭಾರೀ ಅನುಮಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ : ಕಾಂಗ್ರೆಸ್ ಅವಧಿ ದೂರು ಲೋಕಾಯುಕ್ತಕ್ಕೆ ನೀಡ್ತೇವೆ… ತಾವು ಸಾಚಾ ಎನ್ನುತ್ತಿರುವವರ ಬಣ್ಣ ಬಯಲಾಗುತ್ತೆ : ಸಿಎಂ ಬೊಮ್ಮಾಯಿ..