ಚಿತ್ರದುರ್ಗ: ಗರ್ಭಿಣಿಯ ಮೇಲೆ ಗೋಡೆ ಕುಸಿದು ಗಂಡನ ಜೊತೆ ಮಹಿಳೆ ಸ್ಥಳದಲ್ಲೆ ಸಾವನಪ್ಪಿದ್ದಾರೆ. ಈ ದುರ್ಘಟನೆ ಚಿತ್ರದುರ್ಗದ ಹಿರಿಯೂರು ತಾಲ್ಲೂಕಿನ ಹೋಚಿಬೊರಯ್ಯನ ಹಟ್ಟಿಯಲ್ಲಿ ನಡೆದಿದೆ.
ಇದನ್ನೂ ಓದಿ: ಮಾನವ ಹಕ್ಕು ಮತ್ತು ಭ್ರಷ್ಟಾಚಾರ ಮುಕ್ತ ಸಂಘಟನೆಯ ಉಪಾಧ್ಯಕ್ಷನ ಕೊಲೆ.. ನಡು ರಸ್ತೆಯಲ್ಲಿ ಬರ್ಬರವಾಗಿ ಕೊಚ್ಚಿ ಹತ್ಯೆ..
ಚಿತ್ರದುರ್ಗದ ಹಿರಿಯೂರು ತಾಲ್ಲೂಕಿನ ಹೋಚಿಬೊರಯ್ಯನ ಹಟ್ಟಿಯಲ್ಲಿ ಗೋಡೆ ಕುಸಿದು ದಂಪತಿ ಸಾವಿಗೀಡಾಗಿದ್ದಾರೆ. 26 ವರ್ಷದ ಚನ್ನಕೇಶವ ಹಾಗೂ ಆತನ ಗರ್ಭಿಣಿ ಪತ್ನಿ ಸೌಮ್ಯ (20) ಮೃತ ದುರ್ದೈವಿಗಳು. ಇವರು ಗುಡಿಸಲಿನಲ್ಲಿ ಮಲಗಿದ್ದ ವೇಳೆ ಪಕ್ಕದ ಮನೆ ಕುಸಿದು ಇಬ್ಬರೂ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಐಮಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.