ಬೆಂಗಳೂರು : ಸಾರಿಗೆ ಇಲಾಖೆ ಇಂದು ಮಧ್ಯಾಹ್ನ ಮಹತ್ವದ ಸಭೆ ಕರೆದಿದ್ದು, OLA, UBER, RAPIDO ಸೇರಿ ಆ್ಯಪ್ ಸೇವೆ ನೀಡ್ತಿರುವವರ ಜತೆ ಮೀಟಿಂಗ್ ನಡೆಸಲಿದೆ. ಆ್ಯಪ್ ಆಟೋ ಭವಿಷ್ಯ ಇಂದು ಸಂಜೆ ನಿರ್ಧಾರವಾಗಲಿದೆ.
ಆ್ಯಪ್ ಆಟೋಗಳು ನಿಯಮ ಉಲ್ಲಂಘನೆ ಮಾಡಿ ಸೇವೆ ನೀಡುತ್ತಿದ್ದು, RTO ಹೀಗಾಗಿ ನೋಟಿಸ್ ನೀಡಿ ಮೂರು ದಿನಗಳ ಡೆಡ್ಲೈನ್ ನೀಡಿತ್ತು. ನಿನ್ನೆ ಸೀಜ್ ಶುರುವಾಗ್ತಿದ್ದಂತೆ ಆಟೋ ಡ್ರೈವರ್ಗಳಿಂದ ಪ್ರತಿಭಟನೆ ನಡೆಸಿದ್ಧಾರೆ. 6000 ದಂಡ ವಿಧಿಸಿದ್ದಕ್ಕೆ ಆಟೋ ಡ್ರೈವರ್ಗಳ ತೀವ್ರ ಆಕ್ರೋಶ ಹೊರಹಾಕಿದ್ಧಾರೆ. ಜಯನಗರ ಆರ್ಟಿಓ ಕಚೇರಿ ಎದುರು ದಿಢೀರ್ ಪ್ರತಿಭಟನೆ ನಡೆಸಿದ್ಧಾರೆ. ಆ್ಯಪ್ ಸಂಸ್ಥೆಗಳ ಮೇಲೆ ಕ್ರಮ ಕೈಗೊಳ್ಳದೇ ನಮ್ಮ ಮೇಲೇಕೆ ಕ್ರಮ, ಸರ್ಕಾರದ ವಿರುದ್ಧ ಆಟೋ ಡ್ರೈವರ್ಗಳು ಕಿಡಿಕಾರಿದ್ದರು. ಸೀಜ್ ಮಾಡಿದ್ರೆ, ಸಿಎಂ, ಸಚಿವರ ಮನೆಗಳಿಗೆ ಮುತ್ತಿಗೆ ಹಾಕುವ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಸಾರಿಗೆ ಇಲಾಖೆ ಇಂದು ಸಭೆ ಕರೆದಿದೆ.