ನವದೆಹಲಿ : ಅಪರಿಚಿತ ನಂಬರ್, ಸ್ಪ್ಯಾಮ್ ಅಥವಾ ಅನಪೇಕ್ಷಿತ ಕರೆಗಳ ಸಮಸ್ಯೆಯನ್ನು ನಿವಾರಿಸಲು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಹೊಸ ಮಾರ್ಗ ಕಂಡುಹಿಡಿದಿದೆ. ಫೋನ್ ನಲ್ಲಿ ಸೇವ್ ಆಗಿರದ ನಂಬರ್ ನಿಂದ ಯಾರಾದರು ಕರೆ ಮಾಡಿದರೆ ಕರೆ ಮಾಡಿದ ವ್ಯಕ್ತಿಯ ಹೆಸರು ನಿಮ್ಮ ಮೊಬೈಲ್ ನಲ್ಲಿ ಕಂಡುಬರುವಂತೆ ಮಾಡುವ ಹೊಸ ಉಪಕ್ರಮವನ್ನು ಟ್ರಾಯ್ ಶೀಘ್ರವೇ ಜಾರಿಗೆ ತರಲು ಸಜ್ಜಾಗಿದೆ.
ಟೆಲಿಕಾಂ ಆಪರೇಟರ್ ಬಳಿ ಲಭ್ಯವಿರುವ ಕೆವೈಸಿ ದಾಖಲೆಯನ್ನು ಆಧರಿಸಿ ಕರೆ ಮಾಡಿದವರ ಹೆಸರನ್ನು ತಿಳಿಯುವಂತೆ ಮಾಡಲಾಗುತ್ತದೆ. ಈ ಉಪಕ್ರಮ ಜಾರಿಗೆ ಬಂದಾಗ ಮೊಬೈಲ್ ನಲ್ಲಿ ಅಪರಿಚಿತ ನಂಬರ್ ನ ಬದಲು ಕರೆ ಮಾಡುತ್ತಿರುವವರ ಹೆಸರು ಕಾಣಿಸಲಿದೆ. ಪ್ರಸ್ತುತ ಇಂತಹ ಸೌಲಭ್ಯ ವನ್ನು ಪಡೆಯಲು ಜನರು ಟ್ರೂ ಕಾಲರ್ ನಂತಹ ಆಪ್ ಗಳ ಮೊರೆ ಹೋಗಬೇಕಾಗುತ್ತದೆ. ಇಂತಹ ಆ್ಯಪ್ ಗಳು ಮಾಹಿತಿಯನ್ನು ಕ್ರೌಡ್ ಸೋರ್ಸಿಂಗ್ ವಿಧಾನದ ಮೂಲಕ ಸಂಗ್ರಹಿಸುವುದರಿಂದ ಅವು ಅಧಿಕೃತವಾಗಿದೆ ಎನ್ನಲು ಸಾಧ್ಯವಿಲ್ಲ. ಆದರೆ ಕೆವೈಸಿ ಡೆಟಾಗಳು ಸಂಪೂರ್ಣವಾಗಿ ಅಧಿಕೃತ ಮತ್ತು ನಂಬಲು ಅರ್ಹವಾಗಿರುತ್ತದೆ.
ಇದನ್ನೂ ಓದಿ : ಲವ್ ಜಿಹಾದ್ ನಿಷೇಧ ಕಾನೂನು ತರಲು ಸಿಎಂ ಬೊಮ್ಮಾಯಿ ಪ್ಲಾನ್… ಬಿಜೆಪಿ ಹಿರಿಯ ನಾಯಕರಿಂದಲೂ ಗ್ರೀನ್ ಸಿಗ್ನಲ್…