ಮಂಡ್ಯ : ಮಂಡ್ಯ ರಾಜಕೀಯದಲ್ಲಿ ದಿಢೀರ್ ಸ್ಫೋಟಕ ಟ್ವಿಸ್ಟ್ ಸಿಕ್ಕಿದ್ದು, ಕಾಂಗ್ರೆಸ್-ಜೆಡಿಎಸ್ ನಡುವಿನ ಜಿದ್ದಿನ ಯುದ್ಧಕ್ಕೆ ಟ್ವಿಸ್ಟ್ ಆಗಿದೆ. ಜೆಡಿಎಸ್ ಟಕ್ಕರ್ ಕೊಡೋಕೆ ರೆಡಿಯಾಯ್ತಾ ಖೆಡ್ಡಾ..? ಕುರುಕ್ಷೇತ್ರದಲ್ಲಿ ದಳಪತಿಗಳಿಗೆ ಕಾದಿದ್ಯಾ ಬಿಗ್ ಶಾಕ್..? ಜೆಡಿಎಸ್ ಕಟ್ಟಿಹಾಕೋಕೆ ಕೈ ರಚಿಸಿರೋ ರಣವ್ಯೂಹವೇನು..? ಇಡೀ ಜಿಲ್ಲೆಯಲ್ಲೇ ಈ ಬಾರಿ ಕೈ ಮ್ಯಾಜಿಕ್ ಮಾಡೋಕೆ ಸಜ್ಜಾಗಿದೆ. ಆ ವ್ಯೂಹ ರಚನೆಗೆ ಆ ಇಬ್ಬರು ನಾಯಕರು ಒಂದಾಗಿಬಿಟ್ರಾ..? ಯಾರು ಅಂತೀರಾ ಈ ಸ್ಟೋರಿ ಓದಿ…
ಹಾವು ಮುಂಗುಸಿಯಂತಿದ್ದ ಇಬ್ಬರು ನಾಯಕರಲ್ಲಿ ಒಗ್ಗಟ್ಟಿನ ಮಂತ್ರ ಜಪ ಮಾಡಿದ್ದಾರೆ. ಮಂಡ್ಯ ಅಖಾಡದಲ್ಲಿ ಜೆಡಿಎಸ್ ಮುಗಿಸೋಕೆ ಒಂದಾದ್ರಾ ಇಬ್ಬರು..? ಮಾಜಿ ಸಚಿವ ಚಲುವರಾಯಸ್ವಾಮಿ ಮತ್ತು ಮಾಜಿ ಸಂಸದ ಶಿವರಾಮೇಗೌಡ ಒಗ್ಗಟ್ಟಾಗಿದ್ದು, ಕಾಂಗ್ರೆಸ್ ಗೆಲ್ಲಿಸಿ ಜೆಡಿಎಸ್ಗೆ ಸೋಲಿನ ರುಚಿ ತೋರಿಸೋಕೆ ಸಜ್ಜಾಗಿದ್ದಾರೆ. ಈ ಇಬ್ಬರು ನಾಯಕರು ಭಾಯಿ ಭಾಯಿ ಅಂತಾ ಮಾತನಾಡಿದ್ದಾರೆ.
ನಾಯಕರು ಚುನಾವಣೆಗೆ ರಣತಂತ್ರ ಕುರಿತು ಮಾತನಾಡಿದ್ದು, ಜನವರಿ 15ರ ಬಳಿಕ ಸೇರೋಣ ಅಂತಾ ಇಬ್ಬರು ನಾಯಕರ ಮಾತುಕತೆ ನಡೆಸಿದ್ದಾರೆ. ಚಲುವರಾಯಸ್ವಾಮಿ ಸದ್ಯದಲ್ಲೇ ಭೇಟಿ ಮಾಡೋದಾಗಿ, ನೀವೆಲ್ಲಿರ್ತಿರೋ ಅಲ್ಲೇ ಬಂದು ಭೇಟಿ ಮಾಡುವೆ ಎಂದಿದ್ದಾರೆ. ಈ ಬಾರಿ ಇಡೀ ಜಿಲ್ಲೆಯಲ್ಲಿ ದಳಪತಿಗಳಿಗೆ ಸೋಲುಣಿಸೋಕೆ ಮಾಸ್ಟರ್ ಪ್ಲಾನ್ ಮಾಡಿದ್ದು, ಮಂಡ್ಯ ಜಿಲ್ಲೆಯಲ್ಲಿ ಇಬ್ಬರು ನಾಯಕರ ಮಾತುಕತೆಯ ಆಡಿಯೋ ವೈರಲ್ ಆಗಿದೆ.
ಇದನ್ನೂ ಓದಿ : ಕಟೀಲ್ ನಾಲಗೆಗೆ ಮೂಳೆಯಿಲ್ಲ, ಬಾಯಿಗೆ ಬಂದಂತೆ ಹೇಳ್ತಾರೆ… ಕೈ-ತೆನೆ ನಾಯಕರ ಸಭೆ ಕುರಿತ ಕಟೀಲ್ ಹೇಳಿಕೆಗೆ ಡಿಕೆಶಿ ಕಿಡಿ…