ಬೆಂಗಳೂರು : ವರ್ಷದ ಕೊನೆಯ ಚಂದ್ರಗ್ರಹಣ ಇದಾಗಿದ್ದು, ಮಧ್ಯಾಹ್ನ 2.39ಕ್ಕೆ ಚಂದ್ರಗ್ರಹಣ ಪ್ರಾರಂಭವಾಗಿದೆ. ರಕ್ತ ಚಂದ್ರ ಗ್ರಹಣಸಂಜೆ 6.19ಕ್ಕೆ ಅಂತ್ಯವಾಗಲಿದ್ದು, ಕಾರ್ತಿಕ ಹುಣ್ಣಿಮೆಯಂದೇ ರಕ್ತ ಚಂದ್ರಗ್ರಹಣ ಒಟ್ಟಾರೆ 3 ಗಂಟೆ 40 ನಿಮಿಷ ಸಂಭವಿಸಲಿದೆ.
ಸಂಜೆ 5.59ಕ್ಕೆ ಚಂದ್ರೋದಯ ನಂತರ ಭಾರತದಲ್ಲಿ ಗೋಚರವಾಗಲಿದ್ದು, 20ರಿಂದ 25 ನಿಮಿಷ ಕಾರ್ತಿಕ ಹುಣ್ಣಿಮೆ ಗ್ರಹಣ ಕಾಣಿಸಲಿದೆ. ದೆಹಲಿಯಲ್ಲಿ ಸಂಜೆ 5.32 ರಿಂದ 6.18 ರವರೆಗೆ ಗೋಚರಿಸಲಿದ್ದು, ಬೆಂಗಳೂರು ಸಂಜೆ 5.49 , ದೆಹಲಿ ಸಂಜೆ 5.28, ನೋಯ್ಡಾ ಸಂಜೆ 5.30, ಅಮೃತಸರ ಸಂಜೆ 5.32, ಲಕ್ನೋ ಸಂಜೆ 5.16, ಭೋಪಾಲ್ ಸಂಜೆ 5.36, ಲುಧಿಯಾನ ಸಂಜೆ 5.34 , ಜೈಪುರ ಸಂಜೆ 5.37 , ಶಿಮ್ಲಾ ಸಂಜೆ 5.20, ಮುಂಬೈ ಸಂಜೆ 6.01 , ಕೋಲ್ಕತ್ತಾ ಸಂಜೆ 4.52, ರಾಯಪುರ ಸಂಜೆ 5.21, ಪಾಟ್ನಾ ಸಂಜೆ 5.00 , ಇಂದೋರ್ ಸಂಜೆ 5.43 , ಡೆಹ್ರಾಡೂನ್ ಸಂಜೆ 5.22, ಉದಯಪುರ ಸಂಜೆ 5.49 , ಗಾಂಧಿನಗರ ಸಂಜೆ 5.55ಕ್ಕೆ ಗ್ರಹಣ ಗೋಚರವಾಗಲಿದೆ. ಯೂರೋಪ್, ಏಷ್ಯಾ, ಆಸ್ಟ್ರೇಲಿಯಾ, ಅಮೆರಿಕ, ಪೆಸಿಫಿಕ್, ಅಟ್ಲಾಂಟಿಕ್- ಹಿಂದೂ ಮಹಾಸಾಗರದಲ್ಲಿ ಚಂದ್ರಗ್ರಹಣ ಗೋಚರವಾಗಲಿದೆ.
ಇದನ್ನೂ ಓದಿ : ನಿವೃತ್ತ ಐಬಿ ಅಧಿಕಾರಿ ಆರ್.ಎಸ್. ಕುಲಕರ್ಣಿ ಕೊಲೆ ಪ್ರಕರಣ.. ಒಬ್ಬ ಆರೋಪಿ ಅರೆಸ್ಟ್..!