ಬೆಂಗಳೂರು: ಪೋಲಿಸ್ ಬಂಧನದಿಂದ ಸಹಚರನನ್ನು ಬಿಡುಗಡೆ ಗೊಳಿಸಲು ಕಳ್ಳರ ಗುಂಪು ಒಂಟಿಯಾಗಿದ್ದ ವೃದ್ದನ ಕೈಕಾಲು ಕಟ್ಟಿಹಾಕಿ ಮನೆ ದೋಚಿದ ಘಟನೆ ಬೆಳ್ಳಂದೂರಿನಲ್ಲಿ ನಡೆದಿದೆ.
ಇದನ್ನೂ ಓದಿ: ಹುಬ್ಬಳ್ಳಿಯ ಜಯಲಕ್ಷ್ಮೀ ಕಂಫರ್ಟ್ ನಲ್ಲಿ “ಟಚಿಂಗ್ ಟಚಿಂಗ್”…ಲಾಡ್ಜ್ ಮಾಲೀಕ ಸೇರಿ ಐವರ ಬಂಧನ…!
ಹಾಸನ ಪೊಲೀಸರಿಂದ ಅರೆಸ್ಟ್ ಆಗಿದ್ದ ಸಹಚರನನ್ನು ಜಾಮೀನಿನ ಮೇಲೆ ಬಿಡಿಸೋದ್ದಕ್ಕೆ ಮನೆಗೆ ಕಳ್ಳತನ ಮಾಡಿ ಹಣ ಹೊಂದಿಸುಲು ತೇಜಸ್ ಹಾಗೂ ಆತನ ಸಹಚರರಾದ ನಿತಿನ್, ಹೃತಿಕ್, ರಾಜವರ್ಧನ, ಅರುಣ್, ಮಹದೇವ್ ಸ್ಕೇಚ್ ಹಾಕಿದ್ರು. ತೇಜಸ್ ಏನು ಸಾಮಾನ್ಯ ವ್ಯಕ್ತಿಯಲ್ಲ ಮೊದಲೇ ಜೈಲಿಗೆ ಹೋಗಿ ಬಂದಿದ್ದವ. ತನ್ನ ಗ್ಯಾಂಗ್ ನೊಂದಿಗೆ ಸೇರಿ ಹಲವಾರು ರಾಬರಿ ಮಾಡಿದ್ದ. ಇದೇ ಹಿನ್ನೆಲೆ ಪೋಲಿಸರ ಬಂಧನದಲ್ಲಿದ್ದವರನ್ನು ಬಿಡಿಸಿಲು ಇನ್ನೊಂದು ರಾಬರಿಗೆ ಈ ಗ್ಯಾಂಗ್ ಸ್ಕೇಚ್ ಹಾಕಿತ್ತು.
ಇದನ್ನೂ ಓದಿ: ಆಯತಪ್ಪಿ ಐದನೇ ಮಹಡಿಯಿಂದ ಬಿದ್ದು ಕಟ್ಟಡ ಕಾರ್ಮಿಕ ಸಾವು..!
ಬೆಂಗಳೂರಿನ ಬೆಳ್ಳಂದೂರಿನಲ್ಲಿ ಲಕ್ಷ್ಮಣ್ ಎಂಬ ವೃದ್ದ ಒಂಟಿಯಾಗಿ ವಾಸವಾಗಿದ್ರು. ಆಗಸ್ಟ್ 20 ರಂದು ಒಂಟಿಯಾಗಿದ್ದ ವೃದ್ದನ ಮನೆಗೆ ನುಗ್ಗಿದ ಗ್ಯಾಂಗ್ ಲಕ್ಷ್ಮಣ್ ಅವರ ಕೈಕಾಲು ಕಟ್ಟಿಹಾಕಿ ಮನೆ ದೋಚಿದೆ. ವೃದ್ದನ ಮನೆಯಲ್ಲಿದ್ದ ಹಣದ ಜೊತೆಗೆ 40 ಲಕ್ಷದ ಚಿನ್ನಾಭರಣ ಕದ್ದು ಎಸ್ಕೇಪ್ ಆಗುತ್ತಿರುವಾಗ ಕಳ್ಳರ ಓಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಪ್ರಕರಣ ಕುರಿತು ತನಿಖೆ ನಡೆಸುತ್ತಿದ್ದ ಬೆಳ್ಳಂದೂರು ಪೊಲೀಸರು ಸಿಸಿ ಕ್ಯಾಮರಾ ದೃಶ್ಯಾವಳಿ ಹಾಗೂ ಟವರ್ ಡಂಪ್ ಮೂಲಕ ಆರೋಪಿಗಳು ಪತ್ತೆ ಹಚ್ಚಿದ್ದಾರೆ. ಸದ್ಯ ಆರು ಜನರನ್ನು ಅರೆಸ್ಟ್ ಮಾಡಿದ ಪೋಲಿಸರು ಮತ್ತಷ್ಟು ವಿಚಾರಣೆ ನಡೆಸುತ್ತಿದ್ದಾರೆ.