ಬೆಂಗಳೂರು : CID ತನಿಖಾಧಿಕಾರಿ 3 ಕೋಟಿ ಕೇಳಿದ ಪ್ರಕರಣದಲ್ಲಿ ತನಿಖೆ ಮಾಡಿದ್ರೆ ಆ ಅಧಿಕಾರಿ ಲಾಕ್ ಆಗ್ತಾರಾ..? PSI ಕೇಸ್ ಕಿಂಗ್ ಪಿನ್ ಆರ್.ಡಿ.ಪಾಟೀಲ್ ಬಾಂಬ್ ನಿಜಾನಾ..? ತನಿಖೆ ಮಾಡಬೇಕಾದವರೇ ಹಣಕ್ಕೆ ಡಿಮ್ಯಾಂಡ್ ಇಟ್ರಾ..? ಸಿಐಡಿ DySP ಶಂಕರಗೌಡ ಪಾಟೀಲ್ ಲಾಕ್ ಆಗ್ತಾರಾ..?
RDP ಎಲ್ಲಾ ಆರೋಪಿಗಳಿಂದಲೂ ಹಣ ಕೇಳಿದ್ದಾರೆ ಎಂದಿದ್ದಾರೆ. ಈ ಹಿಂದೆಯೂ ಕೇಳಿ ಬಂದಿತ್ತು ಹಣದ ಬೇಡಿಕೆ ಆರೋಪ ಮಾಡಿದ್ದು, ಬ್ಯಾಡರಹಳ್ಳಿ PSI ಹರೀಶ್ ಕೋರ್ಟ್ಗೆ ಅರ್ಜಿ ಹಾಕಿದ್ರು, CID ಅಧಿಕಾರಿಗಳು ಹಣಕ್ಕೆ ಡಿಮ್ಯಾಂಡ್ ಮಾಡ್ತಿದ್ದಾರೆ ಎಂದು ಅರ್ಜಿ ಸಲ್ಲಿಸಿದ್ದಾರೆ. ACB ಅಧಿಕಾರಿಗಳು ತನಿಖೆ ಮಾಡಿ ಸತ್ಯವಿಲ್ಲ ಅಂತಾ ಕೈಬಿಟ್ಟಿದ್ದಾರೆ. PSI ಕೇಸಲ್ಲಿ 50ಕ್ಕೂ ಹೆಚ್ಚು ಅರೆಸ್ಟ್, 150 ಮಂದಿ ವಿಚಾರಣೆ ಆಗಿದೆ. ಹಣ ಕೊಟ್ಟವರನ್ನು ಈ ಪ್ರಕರಣದಿಂದ ಕೈಬಿಟ್ಟಿರೋ ಆರೋಪ ಮಾಡಲಾಗಿದೆ. PSI ಕೇಸಲ್ಲಿ CID ಅಧಿಕಾರಿಗಳು ಕೋಟಿಗಟ್ಟಲೆ ಡಿಮ್ಯಾಂಡ್ ಮಾಡಿದ್ರಾ..?
ಶಂಕರಗೌಡ RD ಪಾಟೀಲ್ ಬಳಿ 3 ಕೋಟಿ ಡಿಮ್ಯಾಂಡ್ ಮಾಡಿದ್ರಂತೆ, ಈಗಾಗಲೆ 76 ಲಕ್ಷ ಕೊಟ್ಟಿರೋದಾಗಿ ವಿಡಿಯೋ ಬಹಿರಂಗ ಪಡಿಸಲಾಗಿದೆ. ಆರ್.ಡಿ.ಪಾಟೀಲ್ ಆರೋಪ ನಿಜ ಎನ್ನುತ್ತಿದ್ದಾರೆ ವಿಚಾರಣೆ ಎದುರಿಸುತ್ತಿದ್ದವರು,
ಕೆಲವರು ಶಂಕರಗೌಡರನ್ನು ತನಿಖೆ ಮಾಡಿದ್ರೆ ಬಣ್ಣ ಬಯಲಾಗುತ್ತೆ ಎನ್ನುತ್ತಿದ್ದಾರೆ. ಕೇಸಿಂದ ಪಾರಾದ್ರೆ ಸಾಕು ಅಂತ ಹಲವರು ಹಣ ಕೊಟ್ಟಿರೋ ಮಾಹಿತಿ ದೊರಕಿದೆ.
ಇದನ್ನೂ ಓದಿ : ಈ ಬಾರಿ ಮಡಿಕೇರಿಯಲ್ಲಿ ಜೆಡಿಎಸ್ಗೆ ಅಧಿಕಾರಿ ಕೊಡಿ.. ನಾಪಂಡ ಮುತ್ತಪ್ಪರನ್ನ ಗೆಲ್ಲಿಸಿ : ಸಂಸದ ಪ್ರಜ್ವಲ್ ರೇವಣ್ಣ..