ಬೆಂಗಳೂರು : ಫ್ಲೈಓವರ್ ಮೇಲಿಂದ ಹಣ ಎರಚಿದ್ದ ಪ್ರಕರಣದಲ್ಲಿ ಅರುಣ ಹಾಗೂ ಸ್ನೇಹಿತ ಸತೀಶ ರಿಲೀಸ್ ಮಾಡಿದ್ದಾರೆ. ಕೆ.ಆರ್. ಮಾರ್ಕೆಟ್ ಪೊಲೀಸರು ರಾತ್ರಿಯೇ ಬಿಟ್ಟು ಕಳುಹಿಸಿದ್ದಾರೆ.
ಈ ಅರುಣ ಹೆಸರು ಮಾಡಲು ಹಣ ಎರಚಿದ್ನಂತೆ ಎಂದು ಪೊಲೀಸರಿಗೆ ನೀಡಿರುವ ಸ್ಟೇಟ್ಮೆಂಟ್ನಲ್ಲಿ ಉಲ್ಲೇಖವಾಗಿದೆ.
ಕಾಲವೇ ಮುಂದೊಂದು ದಿನ ಉತ್ತರ ಕೊಡುತ್ತೆ, ಅದಕ್ಕೆ ಕತ್ತಿಗೆ ಗಡಿಯಾರ ಹಾಕಿಕೊಂಡು ಬಂದಿದ್ದೆ. ಮುಂದೊಂದು ದಿನ ಒಳ್ಳೆ ಕೆಲಸ ಮಾಡೇ ಮಾಡ್ತೀನಿ, ನೆಗೆಟೀವ್ ಆದ್ರೂ ಸರಿ ಹೆಸರು ಮಾಡಬೇಕು ಎಂದುಕೊಂಡಿದ್ದೆ. ಎರಡು ದಿನಗಳ ಹಿಂದೆ ಪ್ಲ್ಯಾನ್ ಮಾಡಿ ನಿನ್ನೆ ಹಣ ಎರಚಿದ್ದೆ, ಸತೀಶನದ್ದು ಏನೂ ತಪ್ಪಿಲ್ಲ, ನಾನು ಕರೆದಿದ್ದಕ್ಕೆ ಬಂದಿದ್ದನು. ಲ್ಯಾಬ್ ನಡೆಸೋ ಸತೀಶ ನನ್ನ ಈವೆಂಟ್ಗೂ ಸಹಕರಿಸ್ತಾನೆ. ನಾನು ನೋಟು ಎಸೆಯೋದು ಸತೀಶನಿಗೆ ತಿಳಿದಿರಲಿಲ್ಲ, ಯಾಕ್ ಹೀಗ್ ಮಾಡ್ದೆ ಮುಂದೆ ತಿಳಿಯುತ್ತೆ ಅಂತಾ ಅರುಣನ ಬಿಲ್ಡಪ್ ಕೊಟ್ಟಿದ್ದಾನೆ.
ಇದನ್ನೂ ಓದಿ : ಭರ್ಜರಿ ಎಂಟ್ರಿ ಕೊಟ್ಟ ಪಠಾಣ್ ಸಿನಿಮಾ… ದೇಶದಾದ್ಯಂತ 5000 ಸಾವಿರಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ರಿಲೀಸ್…