ಬೆಂಗಳೂರು : ಪಾಕ್ ಮೂಲದ ಯುವತಿ ಬೆಂಗಳೂರಿಗೆ ಕರೆತಂದ ಪ್ರಕರಣದಲ್ಲಿ ನಾಲ್ಕು ವರ್ಷದ ಲವ್ ಸ್ಟೋರಿಯೇ ರೋಚಕ ಕಹಾನಿಯಾಗಿದೆ. ತನಿಖಾ ಸಂಸ್ಥೆಗಳಿಂದ ಮುಲಾಯಂಸಿಂಗ್ ವಿಚಾರಣೆ ನಡೆಸಿದ್ದಾರೆ. ಪಾಕ್ನಿಂದ ಯಾರನ್ನಾದ್ರೂ ಕರೆತರೋದು ಅಷ್ಟು ಸುಲಭನಾ..? ಎಲ್ಲಿಂದ ಆಕೆ ನುಸುಳಿ ಭಾರತಕ್ಕೆ ಬಂದಿದ್ದಳು..?
ಬಿಹಾರದ ಗಡಿ ಮೂಲಕ ಭಾರತ ಪ್ರವೇಶಿಸಿರುವ ಮಾಹಿತಿ ದೊರಕಿದೆ. ಗಡಿ ಭದ್ರತೆಯನ್ನ ಮೀರಿ ಬಂದಿದ್ದು ಹೇಗೆ ಎಂಬ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗಿದ್ದು, ಇದು ನಾಲ್ಕು ವರ್ಷಗಳ ಭಾರತ-ಪಾಕಿಸ್ತಾನ್ ಲವ್ ಸ್ಡೋರಿಯಾಗಿದೆ. 2019ರಲ್ಲಿ ಇಕ್ರಾ, ಮುಲಾಯಂ ಸಿಂಗ್ ಲವ್ ಸ್ಟೋರಿ ಶುರುವಾಗಿದೆ. ಯುವತಿ ಇಕ್ರಾ 2021ರಲ್ಲಿ ಪಾಕಿಸ್ತಾನ ಬಿಟ್ಟಿದ್ದಳು, ಯುವತಿ ಟೂರಿಸ್ಟ್ ವೀಸಾದಲ್ಲಿ ಕರಾಚಿಯಿಂದ ದುಬೈ ಸೇರಿದ್ದು, ದುಬೈನಿಂದ ನೇಪಾಳಕ್ಕೆ ಬಂದಿದ್ದಳು.
ಮುಲಾಯಂ ಸಿಂಗ್ ಇದೇ ವೇಳೆಗೆ ಅಲ್ಲಿಗೆ ಸೇರಿಕೊಂಡಿದ್ದನು. ಆರು ತಿಂಗಳ ಹಿಂದೆ ನೇಪಾಳದಲ್ಲೆ ಮದುವೆಯಾಗಿ ಭಾರತಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಲವ್ ಬರ್ಡ್ಸ್ ಬಿಹಾರದ ಮೂಲಕ ಭಾರತಕ್ಕೆ ಎಂಟ್ರಿ ಕೊಟ್ಟಿದ್ದು, ಪಾಕ್ ಯುವತಿ ಐದು ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದಾಳೆ. ಪೊಲೀಸರು ಮುಲಾಯಂ ಕಸ್ಟಡಿಗೆ ಪಡೆದು ವಿಚಾರಣೆ ಮಾಡಲಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆಗಳಿಂದಲೂ ಮುಲಾಯಂ ವಿಚಾರಣೆ ಸಾಧ್ಯತೆಗಳಿದೆ.
ಇದನ್ನೂ ಓದಿ : ಅಡ್ವಾನ್ಸ್ ಬುಕಿಂಗ್ನಲ್ಲಿ KGF 2 ದಾಖಲೆಯನ್ನು ಮುರಿಯಲು ರೆಡಿ ಆದ ಪಠಾಣ್…