ಬೆಂಗಳೂರು : ಫ್ಲೈ ಓವರ್ ಮೇಲಿಂದ ಹಣ ಎಸೆದ ಪ್ರಕರಣ ಸಂಬಂಧ ಡಿಸಿಪಿ ಲಕ್ಷ್ಮಣ್ ನಿಂಬರ್ಗಿ ಪ್ರತಿಕ್ರಿಯಿಸಿ, ಇಂದು 11 ಗಂಟೆಯಲ್ಲಿ ಫ್ಲೈ ಓವರ್ ಮೇಲಿಂದ ವ್ಯಕ್ತಿಯೊಬ್ಬ ಹಣವನ್ನ ಎಸೆದಿದ್ದ,ಆ ವೀಡಿಯೋ ವೈರಲ್ ಕೂಡ ಆಗಿತ್ತು ಎಂದು ಹೇಳಿದ್ದಾರೆ.
ಈ ಬಗ್ಗೆ ಡಿಸಿಪಿ ಲಕ್ಷ್ಮಣ್ ನಿಂಬರ್ಗಿ ಮಾತನಾಡಿ, ಈ ಸಂಬಂಧ ಕೆಆರ್ ಮಾರ್ಕೆಟ್ ಠಾಣೆಯಲ್ಲಿ ಸುಮೋಟೊ ದಾಖಲಿಸಿಕೊಂಡು ವಿಚಾರಣೆ ಶುರುಮಾಡಿದ್ವಿ, ವಿಚಾರಣೆ ವೇಳೆ ಹಣ ಎಸೆದಿರುವುದು ಅರುಣ್ ಎಂಬುವುದು ಗೊತ್ತಾಗಿತ್ತು. ಈಗಾಗ್ಲೇ ಅರುಣ್ ಮೇಲೆ ಕೆಆರ್ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ, ಜನದಟ್ಟಣೆ ಇರುವಂತಹ ಪ್ರದೇಶದಲ್ಲಿ ಹಣವನ್ನ ಎಸೆದಿದ್ದಾನೆ. ಇದರಿಂದ ಜನರ ಸಂಚಾರಕ್ಕೆ ತೊಂದರೆಯುಂಟಾಗಿತ್ತು, ಆ್ಯಂಕರಿಂಗ್ ಹಾಗೂ ಯೂಟ್ಯೂಬ್ ಚಾನಲ್ ಗಳನ್ನ ನಡೆಸ್ತಿದೆ, ಅತೀ ಬೇಗ ಪ್ರಚಾರಕ್ಕಾಗಿ ಈ ರೀತಿ ಕೃತ್ಯ ಎಸಗಿದ್ದಾನೆ. ಆ್ಯಂಕರಿಂಗ್ ನಿಂದ ಬಂದ ಹಣವನ್ನೇ ಫ್ಲೈ ಓವರ್ ನಿಂದ ಎಸೆದಿದ್ದಾನೆ, ಆರೋಪಿ ಟೂ ವೀಲರ್ ನಲ್ಲಿ ಸ್ನೇಹಿತನ ಸತೀಶನ ಜೊತೆ ಬಂದು ಎಸೆದಿದ್ದಾನೆ. ಫೇಸ್ ಬುಕ್, ವಾಟ್ಸಪ್ ಹಾಗೂ ಇನ್ಸ್ಟಾದಲ್ಲಿ ವೀಡಿಯೋ ವನ್ನಹರಿಬಿಟ್ಟಿದ್ದಾನೆ. ಅರುಣನ ಸ್ನೇಹಿತ ಸತೀಶನನ್ನೂ ಕೂಡ ವಿಚಾರಣೆ ನಡೆಸ್ತಿದ್ದೇವೆ ಎಂದು ಹೇಳಿದ್ದಾರೆ.