ದೆಹಲಿ : ಮಿಡ್ನೈಟ್ನಲ್ಲಿ ರಾಜಧಾನಿ ದೆಹಲಿ ಶೇಕ್ ಆಗಿದ್ದು, ದೆಹಲಿ, ಮಣಿಪುರ ಸೇರಿದಂತೆ ಹಲವೆಡೆ ಭೂಕಂಪ ಆಗಿದೆ.
ನೇಪಾಳ ಗಡಿಯ ಉತ್ತರಾಖಂಡ್ನಲ್ಲಿ ಕೇಂದ್ರ ಬಿಂದುವಾಗಿದೆ. ನೇಪಾಳದಲ್ಲಿ ಭೂಕಂಪಕ್ಕೆ 10 ಸಾವು, ಹಲವರಿಗೆ ಗಾಯಗಳಾಗಿದೆ. ರಿಕ್ಟರ್ ಮಾಪಕದಲ್ಲಿ 6.3ರಷ್ಟು ತೀವ್ರತೆ ದಾಖಲಾಗಿದೆ. ಭೂಕಂಪ ಮಧ್ಯರಾತ್ರಿ 1.57ರ ಸುಮಾರಿಗೆ ಸಂಭವಿಸಿದೆ.
ನೇಪಾಳದ ದೋತಿ ಜಿಲ್ಲೆಯಲ್ಲಿ ಮನೆಗಳು ಧರೆಗುರುಳಿದೆ. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ದೆಹಲಿ ಸುತ್ತಮುತ್ತ ಕಂಪನವಾಗಿದೆ. ಭೂಮಿಯಿಂದ 10 ಕಿಮೀ ಆಳದಲ್ಲಿ ಕಂಪನ ಸಂಭವಿಸಿದೆ. ನೇಪಾಳದಲ್ಲಿ ನಿನ್ನೆ ಒಂದೇ ದಿನ ಎರಡು ಬಾರಿ ಭೂಕಂಪವಾಗಿದೆ. ದೆಹಲಿ, ಮಣಿಪುರದಲ್ಲಿ ಯಾವುದೇ ಹಾನಿಯಾಗಿಲ್ಲ. ಭೂಮಿ ಕಂಪಿಸುತ್ತಿದ್ದಂತೆ ಮನೆಯಿಂದ ಜನರು ಹೊರಬಂದಿದ್ದಾರೆ. ಬೆಳಗಿನಜಾವದವರೆಗೂನೂರಾರು ಮಂದಿ ರಸ್ತೆಯಲ್ಲೇ ಕಾಲ ಕಳೆದಿದ್ಧಾರೆ.
ಇದನ್ನೂ ಓದಿ : ನವೆಂಬರ್ 14 ರಂದು “ಸ್ಪೂಕಿ ಕಾಲೇಜ್” ಚಿತ್ರದ “ಮೆಲ್ಲುಸಿರೆ ಸವಿಗಾನ” ಹಾಡು ಬಿಡುಗಡೆ…!