ಬಾಗಲಕೋಟೆ: ವಕೀಲೆಯ ಮೇಲೆ ಬಾಗಲಕೋಟೆ ನಗರದಲ್ಲಿ ಭಯಾನಕ ಹಲ್ಲೆ ನಡೆದಿದ್ದು, ನಡು ರಸ್ತೆಯಲ್ಲೇ ರಾಕ್ಷಸನಂತೆ ವ್ಯಕ್ತಿ ವರ್ತಿಸಿದ್ದಾನೆ. ಬಾಗಲಕೋಟೆಯ ವಿನಾಯಕ ನಗರ ಕ್ರಾಸ್ನಲ್ಲಿ ಹಲ್ಲೆ ಮಾಡಲಾಗಿದ್ದು, ವಕೀಲೆ ಸಂಗೀತಾ ಶಿಕ್ಕೇರಿ ಮೇಲೆ ಹಲ್ಲೆ ಮಾಡಲಾಗಿದೆ.
ವಿನಾಯಕ ನಗರದ ಮಹಾಂತೇಶ ಚೊಳಚಗುಡ್ಡ ಎಂಬ ವ್ಯಕ್ತಿ ವಕೀಲೆ ಮೇಲೆ ಹಲ್ಲೆ ನಡೆಸಿದ್ದಾನೆ. ಈತ ಸಂಗೀತಾ ಮತ್ತು ಆಕೆಯ ಪತಿ ಮೇಲೆ ರಕ್ತ ಬರುವ ರೀತಿ ಹಲ್ಲೆ ನಡೆಸಿದ್ದಾನೆ. ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ಸಂಗೀತಾ ದಂಪತಿಗೆ ಟ್ರೀಟ್ಮೆಂಟ್ ನೀಡಲಾಗುತ್ತಿದೆ. ಮನೆ ಖಾಲಿ ಮಾಡಿಸುವ ವಿಚಾರದಲ್ಲಿ ಜಗಳ ನಡೆದಿತ್ತು. ಹೀಗಾಗಿ ರಾಜು ನಾಯ್ಕರ್ ಮೇಲೆ ವಕೀಲೆ ದೂರು ದಾಖಲಿಸಿದ್ದರು, ಈ ಹಿನ್ನೆಲೆಯಲ್ಲಿ ನಾಯ್ಕರ್ ಬೆಂಬಲಿಗ ಮಹಾಂತೇಶ ಚೊಳಚಗುಡ್ಡ ವಕೀಲೆ ಮೇಲೆ ಹಲ್ಲೆ ಮಾಡಿದ್ದಾನೆ.