ಕಲಬುರಗಿ: ಕಲಬುರಗಿಯಲ್ಲೂ ಟೆಂಪಲ್ ವಿವಾದ ಶುರುವಾಗಿದ್ದು, ಬಹಮನಿ ಕೋಟೆಯ ದೇಗುಲ ಪುನಶ್ಚೇತನಕ್ಕೆ ಪಟ್ಟು ಹಿಡಿದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಹಿಂದು ಜಾಗೃತಿ ಸೇನೆ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ.
ಸ್ವಯಂಭೋ ಸೋಮಲಿಂಗೇಶ್ವರ ದೇಗುಲ ಪುನಶ್ಚೇತನಕ್ಕೆ ಆಗ್ರಹ ಮಾಡಲಾಗುತ್ತಿದ್ದು, ಕಲ್ಲು ಕಂಬಗಳ ಮೇಲೆ ದೇವರ ವಿಗ್ರಹಗಳ ಕೆತ್ತನೆ ಕುರುಹು ಲಭ್ಯವಾಗಿದ್ದು, ದೇವಾಲಯದ ಮುಂಭಾಗ ಕಲ್ಯಾಣಿ ಇರೋದು ಬೆಳಕಿಗೆ ಬಂದಿದೆ.
ಬಹಮನಿ ಸುಲ್ತಾನರ ಮೊದಲ ರಾಜಧಾನಿ ಕಲಬುರಗಿಯಾಗಿದ್ದು, ಕೋಟೆಯಲ್ಲಿದೆ ಜಾಮಿಯಾ ಮಸೀದಿ, ವಿಶ್ವದ ಉದ್ದದ ತೋಪು. ಸುಮಾರು 70 ಎಕರೆ ವಿಸ್ತೀರ್ಣದ ಕಲಬುರಗಿ ಕೋಟೆ, ಕೋಟೆಯ ಈಶಾನ್ಯ ದಿಕ್ಕಿನಲ್ಲಿ ಸೋಮೇಶ್ವರ ದೇವಸ್ಥಾನವಿದೆ.
ಇದನ್ನೂ ಓದಿ:ಬೆಂಗಳೂರಿಗೆ ಕಾದಿದೆ ಕಂಟಕ..! ರಾಜ್ಯದಲ್ಲಿ ಇನ್ನೂ ಎರಡು ದಿನಗಳ ಕಾಲ ಭಾರೀ ಮಳೆ… ಹವಾಮಾನ ಇಲಾಖೆಯಿಂದ ಮುನ್ಸೂಚನೆ…!