ಬೆಂಗಳೂರು: ನಟ ಚಂದನ್ ನನ್ನು ತೆಲುಗು ಸೀರಿಯಲ್, ಒಟಿಟಿಗಳಿಂದ ಬ್ಯಾನ್ ಮಾಡಿ ಎಂದು ತೆಲುಗು ಟೆಲಿವಿಷನ್ ಟೆಕ್ನಿಷಿಯನ್ಸ್ ಹಾಗೂ ವರ್ಕರ್ಸ್ ಫೆಡರೇಷನ್ ತೆಲುಗು ಟೆಲಿವಿಷನ್ ನಿರ್ಮಾಪಕರ ಮಂಡಳಿಗೆ ಪತ್ರ ಬರೆದು ಮನವಿ ಮಾಡಿದೆ.
ತೆಲುಗಿನ ಸೀರಿಯಲ್ ಸೆಟ್‌ನಲ್ಲಿ ಕನ್ನಡ ನಟ ಚಂದನ್ ಮೇಲೆ ಹಲ್ಲೆ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿದ್ದ ಚಂದನ್ ಮಾಡದ ತಪ್ಪಿಗೆ ತನ್ನ ಮೇಲೆ ತೆಲುಗು ಸೀರಿಯಲ್ ಸೆಟ್‌ನಲ್ಲಿ ಹಲ್ಲೆ ಮಾಡಿದ್ದಾರೆ, ಈ ಕಾರಣದಿಂದ ಮತ್ತೆಂದೂ ತೆಲುಗಿನ ಸಿರೀಯಲ್‌ಗೆ ಹೋಗಲ್ಲ ಎಂದಿದ್ದರು. ಆದರೆ ಈಗ ಎಂದು ತೆಲುಗು ಟೆಲಿವಿಷನ್ ಟೆಕ್ನಿಷಿಯನ್ಸ್ ಹಾಗೂ ವರ್ಕರ್ಸ್ ಫೆಡರೇಷನ್ ಬರೆದಿರುವ ಪತ್ರ ಮತ್ತೊಂದು ಆಯಾಮವನ್ನು ಬಿಚ್ಚಿಟ್ಟಿದೆ.
ತೆಲಗು ಸೀರಿಯಲ್ ಒಂದರ ಚಿತ್ರೀಕರಣ ನಡೆಯುತ್ತಿತ್ತು, ಆಗ ಸಹಾಯಕ ನಿರ್ದೇಶಕ 3 ರಿಂದ 4 ಬಾರಿ ಶಾಟ್‌ಗೆ ಬರುವಂತೆ ಚಂದನ್‌ಗೆ ತಿಳಿಸಿದ್ದಾರೆ. ಆಗ ಚಂದನ್, ಹೇಳಿದ್ದನ್ನೇ ಎಷ್ಟು ಬಾರಿ ಹೇಳ್ತೀಯಾ ಅಂತ ಜಗಳವಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಸಹಾಯಕ ನಿರ್ದೇಶಕರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪತ್ರದಲ್ಲಿ ಘಟನೆಯ ಸಂಪೂರ್ಣ ವಿವರಗಳನ್ನು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಚಂದನ್ ಪ್ರೆಸ್ ಮೀಟ್ ಮಾಡೋದಕ್ಕೆ ಮೊದಲೇ ಬ್ಯಾನ್ ಆಗಿದ್ರಾ ಎಂಬ ಹೊಸ ಪ್ರಶ್ನೆ ಹುಟ್ಟುಕೊಂಡಿದೆ.