ಹೈದರಾಬಾದ್: ನರೇಶ್ ಮತ್ತು ಪವಿತ್ರಾ ಕೋಕೇಶ್ ಪ್ರಕರಣಕ್ಕೆ ತೆಲುಗು ನಟಿ ಶ್ರೀ ರೆಡ್ಡಿ ಎಂಟ್ರಿ ಕೊಟ್ಟಿದ್ದು ನಿಜವಾಗಿಯೂ ಜನರ ಮುಂದೆ ಬೆತ್ತಲಾಗಿದ್ದು ಯಾರು ಎಂದು ಪ್ರಶ್ನಿಸಿದ್ದಾರೆ.
ನಿನ್ನೆ ಮೈಸೂರಿನ ಹೋಟೆಲ್ ನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ನರೇಶ್ ಮತ್ತು ಪವಿತ್ರಾ ಅಲ್ಲಿಂದ ಬೌನ್ಸರ್ಸ್ ಗಳು ಮತ್ತು ಪೊಲೀಸರ ರಕ್ಷಣೆಯಲ್ಲಿ ತೆರಳಿದ್ದರು. ಸದ್ಯ ನಟಿ ಪವಿತ್ರಾ ಲೋಕೇಶ್, ನಟ ನರೇಶ್ ಹೈದರಾಬಾದ್ ಗೆ ಹೋಗಿದ್ದಾರೆ ಎನ್ನಲಾಗುತ್ತಿದೆ. ಇದರ ನಡುವೆಯೇ ನಟಿ ಶ್ರೀರೆಡ್ಡಿ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬಂದು ನರೇಶ್ ಮತ್ತು ಪವಿತ್ರಾ ಲೋಕೇಶ್ ವಿರುದ್ಧ ಕಿಡಿ ಕಾರಿದ್ದಾರೆ.
ಇದನ್ನೂ ಓದಿ: ರೂಮಿನಿಂದ ಒಟ್ಟಿಗೆ ಹೊರಬಂದ ನರೇಶ್-ಪವಿತ್ರಾ ಲೋಕೇಶ್..! ನರೇಶ್ ಬಾಬು ಜೊತೆ ಜಗಳಕ್ಕಿಳಿದ ಪತ್ನಿ ರಮ್ಯಾ ರಘುಪತಿ..!
ಮೀಟೂ ಪ್ರಕರಣದಲ್ಲಿ ಪ್ರತಿಭಟನೆ ನಡೆಸಿದಾಗ ಆ್ಯಸಿಡ್ ನಿಂದ ತೊಳೆದುಕೊಂಡು ಮುಟ್ಟಬೇಕು ಎಂದಿದ್ದರು ನರೇಶ್, ಈಗ ಅದೇ ನರೇಶ್ ಸ್ಥಿತಿ ಏನಾಗಿದೆ ನೋಡಿ. ಯಾರೂ ಮತ್ತೊಬ್ಬರ ಬದುಕಿನಲ್ಲಿ ಬಿರುಗಾಳಿ ಎಬ್ಬಿಸಬಾರದು ಎಂದು ಪರೋಕ್ಷವಾಗಿ ನರೇಶ್ ಮತ್ತು ಪವಿತ್ರಾ ಲೋಕೇಶ್ ಗೆ ಟಾಂಗ ನೀಡಿದ್ದಾರೆ.
ರಮ್ಯಾ ಜೀವನ ಹಾಳು ಮಾಡುವ ಹಕ್ಕು ಯಾರಿಗೂ ಇಲ್ಲ, ನಿಜವಾಗಿಯೂ ಜನರ ಮುಂದೆ ಬೆತ್ತಲಾಗಿದ್ದು ಯಾರು ಎಂದು ಶ್ರೀರೆಡ್ಡಿ ಪ್ರಶ್ನಿಸಿದ್ದಾರೆ.