ಬೆಂಗಳೂರು: ಗಂಡನ ಕಿರುಕುಳಕ್ಕೆ ಬೇಸತ್ತು ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕಿರುಕುಳ ನೀಡಿದ್ದ ಎಂದು ಡೆತ್ನೋಟ್ನಲ್ಲಿ ಆರೋಪ ಮಾಡಿ ನೇಣಿಗೆ ಶರಣಾಗಿದ್ದಾಳೆ.
ಬೆಂಗಳೂರಿನ ಅಮೃತಹಳ್ಳಿಯ ವೀರಣ್ಣಪಾಳ್ಯದಲ್ಲಿ ಈ ಘಟನೆ ನಡೆದಿದ್ದು, 4 ವರ್ಷದ ಹಿಂದೆ ಸಂಗೀತಾ ಮತ್ತು ವಿನಯ್ ಪ್ರೀತಿಸಿ ಮದುವೆಯಾಗಿದ್ದರು. ಖಾಸಗಿ ಕಂಪನಿಯಲ್ಲಿ ಇಬ್ಬರೂ ಎಂಜಿನಿಯರ್ಗಳಾಗಿ ಕೆಲಸ ಮಾಡುತ್ತಿದ್ದರು. ಗಂಡನ ಕಿರುಕುಳದಿಂದ ಬೇಸತ್ತಿದ್ದ 26 ವರ್ಷದ ಸಂಗೀತಾ ನೇಣಿಗೆ ಶರಣಾಗಿದ್ದು, ಸಾಯುವ ಮುನ್ನ ಡೆತ್ನೋಟ್ ನಲ್ಲಿ ಪತಿ ವಿನಯ್ ಕಿರುಕುಳ ನೀಡಿದ್ದ ಅಂತಾ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಂಗೀತಾಳ ಆರೋಪದ ಮೇಲೆ ಇದೀಗ ಪತಿ ವಿನಯ್ನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಸೇನಾ ಹೆಲಿಕಾಪ್ಟರ್ ದುರಂತ…! ಉಡುಪಿಯ ಹೆಮ್ಮೆಯ ಅಳಿಯ ಲೆ.ಕರ್ನಲ್ ಹರ್ಜಿಂದರ್ ಸಿಂಗ್ ಹುತಾತ್ಮ…! ಕಾರ್ಕಳದಲ್ಲಿ ನೀರವ ಮೌನ…!