ಬೆಂಗಳೂರು: ಬೆಂಗಳೂರಿನಲ್ಲಿ ಎಮ್ಮೆಗಳ ವಿರುದ್ಧ ಟೆಕ್ಕಿಗಳು ದೂರು ನೀಡಿದ್ದು, ಎಮ್ಮೆಗಳ ಕಾಟಕ್ಕೆ ಐಟಿ-ಬಿಟಿ ಕಂಪನಿ ಉದ್ಯೋಗಿಗಳು ಕಂಗಾಲಾಗಿದ್ದಾರೆ. ಯಾಕೆ ಅಂತೀರಾ ಈ ಸ್ಟೋರಿ ಓದಿ..
ಹೌದು, ಪ್ರತಿ ನಿತ್ಯ ಎಮ್ಮೆಗಳಿಂದ ತೊಂದರೆ ಅಂತ ಟ್ವಿಟರ್ ಮೂಲಕ ಟ್ರಾಫಿಕ್ ಪೊಲೀಸರಿಗೆ ದೂರು ನೀಡಲಾಗಿದೆ. ಮಾರ್ನಿಂಗ್ ಟೈಮ್ ನಲ್ಲಿ , ಆಫೀಸ್ ಹೊತ್ತಲ್ಲಿ ಎಮ್ಮೆಗಳಿಂದ ಪ್ರಾಬ್ಲಂ ಆಗುತ್ತಿದೆ, ಎಮ್ಮೆಗಳಿಂದ ಆಫೀಸ್ ರೂಟ್ ಎಲ್ಲಿ ಹೆವಿ ಟ್ರಾಫಿಕ್ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆಫೀಸ್ ದಾರಿಯಲ್ಲಿ ಎಮ್ಮೆಗಳು ಸರದಿ ಸಾಲಿನಲ್ಲಿ ಬರುತ್ತೆ, ಈ ವೇಳೆ 30 ರಿಂದ 45 ನಿಮಿಷ ಎಮ್ಮೆಗಳಿಂದ ಟ್ರಾಫಿಕ್ ಜಾಮ್ ಆಗ್ತಿದೆ. ಇದರಿಂದ ಬೆಂಗಳೂರಿನ ಕಸವನಹಳ್ಳಿ ರೋಡ್ ನಲ್ಲಿ ಪ್ರತಿನಿತ್ಯ ಟ್ರಾಫಿಕ್ ಜಾಂ ಆಗುತ್ತಿದೆ.
ಹೀಗಾಗಿ ಟೀಟ್ವರ್ ನಲ್ಲಿ ಪಶುಸಂಗೋಪನಾ ಇಲಾಖೆ, ಟ್ರಾಫಿಕ್ ಪೋಲಿಸ್, ಬಿಬಿಎಂಪಿಗೆ ಟ್ಯಾಗ್ ಮಾಡಿ ದೂರು ನೀಡಲಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಟೀಟ್ವರ್ ಮೂಲಕ ಕಂಪ್ಲೆಂಟ್ ಮಾಡಲಾಗಿದ್ದು, ಕಳೆದ ಆರೇಳು ತಿಂಗಳಿಂದ ಎಮ್ಮೆ ಸಮ್ಯಸೆಯಿಂದ MNC ಟೆಕ್ಕಿಗಳು ಕಂಗಾಲಾಗಿದ್ದಾರೆ. ಎಮ್ಮೆಗಳಿಂದ ಟ್ರಾಫಿಕ್ ಜಾಮ್ ಆಗಿ ಆಫೀಸ್ ಗೆ ನಿತ್ಯ ತಡವಾಗುತ್ತಿದೆ, ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳಿ ಅಂತ ಟ್ವೀಟ್ ಮಾಡಿ ಟೆಕ್ಕಿಗಳು ದೂರು ಕೊಟ್ಟಿದ್ದಾರೆ.