ಟ್ರೆನಿಡಾಡ್: ಅತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ಗಳಿಸಿದ ಅರ್ಧ ಶತಕ ಮತ್ತು ದಿನೇಶ್ ಕಾರ್ತಿಕ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ 190 ರನ್ ಗಳಿಸಿದ್ದು ವೆಸ್ಟ್ ಇಂಡೀಸ್ ಗೆ 191 ರನ್ ಗುರಿ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಬಂದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಿತು. 44 ರನ್ ಆಗಿದ್ದಾಗ ಆರಂಭಿಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಔಟಾದರು. ಯಾದವ್ ಬೆನ್ನಲ್ಲೇ ಶ್ರೇಯಸ್ ಅಯ್ಯರ್ ಡಕ್ ಔಟಾದರು. ಇನ್ನು ರಿಷಭ್ ಪಂತ್ 14, ಹಾರ್ದಿಕ್ ಪಾಂಡ್ಯ 1 ಮತ್ತು ರವೀಂದ್ರ ಜಡೇಜಾ 16 ರನ್ ಗಳಿಸಿ ಔಟಾದರು.
Captain @ImRo45 top-scored for #TeamIndia and was our top performer from the first innings of the first #WIvIND T20I. 👏 👏
A summary of his knock 👇 pic.twitter.com/Jog2c2u1qW
— BCCI (@BCCI) July 29, 2022
ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ರೋಹಿತ್ ಶರ್ಮಾ ಉತ್ತಮ ಆಟವಾಡಿ ಅರ್ಧ ಶತಕ ಗಳಿಸಿ ತಂಡದ ಮೊತ್ತವನ್ನು 100 ರ ಗಡಿ ದಾಟಿಸಿದರು. ರೋಹಿತ್ ಶರ್ಮಾ 64 ರನ್ ಗಳಿಸಿ ಔಟಾದರು. ಇನಿಂಗ್ಸ್ ಕೊನೆಯಲ್ಲಿ ದಿನೇಶ್ ಕಾರ್ತಿಕ್ ಭರ್ಜರಿ ಆಟವಾಡಿ 41 ರನ್ ಗಳಿಸಿ ತಂಡದ ಮೊತ್ತವನ್ನು 190 ಕ್ಕೆ ತಲುಪಿಸಿದರು.
ಅಂತಿಮವಾಗಿ ಟೀಂ ಇಂಡಿಯಾ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿತು. ವೆಸ್ಟ್ ಇಂಡೀಸ್ ಪರ ಅಲ್ಜಾರಿ ಜೋಸೆಫ್ 2 ವಿಕೆಟ್ ಪಡೆದರು. ಜೇಸನ್ ಹೋಲ್ಡರ್, ಕೀಮೋ ಪೌಲ್, ಅಕೇಲ್ ಹೊಸೈನ್, ಒಬೆಡ್ ಮೆಕಾಯ್ ತಲಾ 1 ವಿಕೆಟ್ ಪಡೆದರು.