ದುಬೈ: ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಗಳಿಸಿದ ಭರ್ಜರಿ ಅರ್ಧ ಶತಕದ ನೆರವಿನಿಂದ ಟೀಂ ಇಂಡಿಯಾ 173 ರನ್ ಗಳಿಸಿದ್ದು ಶ್ರೀಲಂಕಾಗೆ 174 ರನ್ ಟಾರ್ಗೆಟ್ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಗೆ ಉತ್ತಮ ಆರಂಭ ದೊರೆಯಲಿಲ್ಲ. ಕೇವಲ 13 ರನ್ ಗಳಿಸುವಷ್ಟರಲ್ಲಿ ಕೆ.ಎಲ್. ರಾಹುಲ್ ಮತ್ತು ವಿರಾಟ್ ಕೊಹ್ಲಿ ಔಟಾದರು. ರಾಹುಲ್ 6 ರನ್ ಗಳಿಸಿದರೆ, ಕೊಹ್ಲಿ ಶೂನ್ಯಕ್ಕೆ ಔಟಾದರು. ಬಳಿಕ ಜೊತೆಯಾದ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ತಂಡಕ್ಕೆ ಚೇತರಿಕೆ ನೀಡಿದರು.
ರೋಹಿತ್ ಶರ್ಮಾ 72 ರನ್ ಸಿಡಿಸಿ ತಂಡದ ಮೊತ್ತವನ್ನು 100 ರ ಗಡಿ ದಾಟಿಸಿ ಔಟಾದರು. ಉಳಿದಂತೆ ಸೂರ್ಯಕುಮಾರ್ ಯಾದವ್ 34, ಹಾರ್ದಿಕ್ ಪಾಂಡ್ಯ ಮತ್ತು ರಿಷಭ್ ಪಂತ್ ತಲಾ 17 ರನ್ ಗಳಿಸಿದರು.
Leading from the front, Captain @ImRo45 brings up a fine FIFTY off 32 deliveries 👏👏
Live – https://t.co/JFtIjXSBXC #INDvSL #AsiaCup2022 pic.twitter.com/8ReqyqTS94
— BCCI (@BCCI) September 6, 2022
ಅಂತಿಮವಾಗಿ ಟೀಂ ಇಂಡಿಯಾ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತು.
ಶ್ರೀಲಂಕಾ ಪರ ದಿಲ್ಶನ್ ಮದುಶನಕ 3 ವಿಕೆಟ್ ಪಡೆದರೆ, ಸಸುನ್ ಶನಕ 2. ಚಾಮಿಕ ಕರುಣಾರತ್ನೆ 2 ವಿಕೆಟ್ ಪಡೆದರು. ಮಹೇಶ ತೀಕ್ಷಣ 1 ವಿಕೆಟ್ ಪಡೆದರು.