ರಾಜ್ ಕೋಟ್: ದಿನೇಶ್ ಕಾರ್ತಿಕ್ ಗಳಿಸಿದ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ 169 ರನ್ ಗಳಿಸಿದ್ದು, ದಕ್ಷಿಣ ಆಫ್ರಿಕಾಗೆ 170 ರನ್ ಗುರಿ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಬಂದ ಟೀಂ ಇಂಡಿಯಾಗೆ ಆರಂಭದಲ್ಲೇ ಆಘಾತ ಎದುರಾಯಿತು. ಋತುರಾಜ್ ಗಾಯಕ್ವಾಡ್ 5 ರನ್ ಗಳಿಸಿ ಔಟಾದರೆ ಶ್ರೇಯಸ್ ಅಯ್ಯರ್ 4 ರನ್ ಗಳಿಸಿ ಔಟಾದರು. ಇನ್ನು ಇಶಾನ್ ಕಿಶನ್ 27 ರನ್ ಗಳಿಸಿ ಔಟಾದರು. ಬಳಿಕ ಜೊತೆಯಾದ ಹಾರ್ದಿಕ್ ಪಾಂಡ್ಯ ಮತ್ತು ರಿಷಭ್ ಪಂತ್ ತಂಡಕ್ಕೆ ಚೇತರಿಕೆ ನೀಡಲು ಪ್ರಯತ್ನಿಸಿದರು ಆದರೆ ಪಂತ್ 17 ರನ್ ಗಳಿಸಿ ಔಟಾದರು.
ಪಂತ್ ಔಟಾದ ಬಳಿಕ ಕ್ರೀಸ್ ಗೆ ಬಂದ ದಿನೇಶ್ ಕಾರ್ತಿಕ್ ಮತ್ತು ಹಾರ್ದಿಕ್ ಪಾಂಡ್ಯ ಜೋಡಿ ಉತ್ತಮ ಜೊತೆಯಾಟವಾಡಿ ತಂಡದ ಮೊತ್ತವನ್ನು 150ರ ಗಡಿಗೆ ಕೊಂಡೋಯ್ದರು. ಉತ್ತಮವಾಗಿ ಆಡುತ್ತಿದ್ದ ಹಾರ್ದಿಕ್ ಪಾಂಡ್ಯ 46 ರನ್ ಗಳಿಸಿ ಔಟಾದರು. ಭರ್ಜರಿ ಅರ್ಧ ಶತಕ ಸಿಡಿಸಿದ ದಿನೇಶ್ ಕಾರ್ತಿಕ್ 55 ರನ್ ಗಳಿಸಿ ಔಟಾದರು. ಅಂತಿಮವಾಗಿ ಟೀಂ ಇಂಡಿಯಾ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿದೆ.
.@DineshKarthik was the pick of the #TeamIndia batters and was our top performer from the first innings of the fourth @Paytm #INDvSA T20I. 👍 👍
A summary of his knock 🔽 pic.twitter.com/L5ngT7WE5B
— BCCI (@BCCI) June 17, 2022
ದಕ್ಷಿಣ ಆಫ್ರಿಕಾ ಪರ ಲುಂಗಿ ಎನ್ಗಿಡಿ 2, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಅನ್ರಿಚ್ ನಾರ್ಟ್ಜೆ, ಡ್ವೈನ್ ಪ್ರಿಟೋರಿಯಸ್ ತಲಾ 1 ವಿಕೆಟ್ ಪಡೆದರು.