ಮುಂಬೈ: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ 3 ಟಿ20 ಪಂದ್ಯಗಳ ಸರಣಿಯನ್ನು ಟೀಂ ಇಂಡಿಯಾ ಕ್ಲೀನ್ ಸ್ವೀಪ್ ಮಾಡುವ ಮೂಲಕ ಟಿ20 ರ‍್ಯಾಂಕಿಂಗ್ ನಲ್ಲಿ ಅಗ್ರಸ್ಥಾನಕ್ಕೇರಿದೆ.
ನಿನ್ನೆ ನಡೆದ ಮೂರನೇ ಪಂದ್ಯದಲ್ಲಿ ಟೀಂ ಇಂಡಿಯಾ 17 ರನ್ ಗಳಿಂದ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿತ್ತು. ಈ ಮೂಲಕ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿತ್ತು. ಈ ಮೂಲಕ ಟೀಂ ಇಂಡಿಯಾ 269 ರೇಟಿಂಗ್ ಪಾಯಿಂಟ್ ಕಲೆ ಹಾಕುವ ಮೂಲಕ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಆದರೆ ಇಂಗ್ಲೆಂಡ್ ತಂಡ ಸಹ 269 ರೇಟಿಂಗ್ ಪಾಯಿಂಟ್ಸ್ ಹೊಂದಿದೆ. ಆದರೆ ಭಾರತ ತಂಡ ಒಟ್ಟು 10484 ಪಾಯಿಂಟ್ಸ್ ಹೊಂದಿದೆ. ಆದರೆ ಇಂಗ್ಲೆಂಡ್ 10474 ಪಾಯಿಂಟ್ಸ್ ಹೊಂದಿದೆ. 10 ಪಾಯಿಂಟ್ಸ್ ಹೆಚ್ಚು ಇರುವ ಕಾರಣ ಭಾರತ ತಂಡ ರ್ಯಾಂಕಿಂಗ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.
#TeamIndia are now No.1 in the ICC Men's T20I Team rankings 🎉🎉 pic.twitter.com/3LeMLGOtD3
— BCCI (@BCCI) February 21, 2022
ಉಳಿದಂತೆ ಪಾಕಿಸ್ತಾನ (266 ರೇಟಿಂಗ್ ಪಾಯಿಂಟ್), ನ್ಯೂಜಿಲೆಂಡ್ (255) ಮತ್ತು ದಕ್ಷಿಣ ಆಫ್ರಿಕಾ (253) ನಂತರದ ಸ್ಥಾನದಲ್ಲಿವೆ. ಆಸ್ಟ್ರೇಲಿಯಾ ತಂಡ (249) 6 ನೇ ಸ್ಥಾನದಲ್ಲಿದೆ, ಉಳಿದಂತೆ ವೆಸ್ಟ್ ಇಂಡೀಸ್ (235) 7ನೇ, ಅಫ್ಘಾನಿಸ್ತಾನ (232) ಎಂಟನೇ, ಶ್ರೀಲಂಕಾ (231) ಒಂಭತ್ತನೇ ಮತ್ತು ಬಾಂಗ್ಲಾದೇಶ (231) ಹತ್ತನೇ ಸ್ಥಾನದಲ್ಲಿದೆ.
A new team on top of the ICC @MRFWorldwide Men's T20I Rankings 👀
Details 👇https://t.co/fVOjhQo8J5
— ICC (@ICC) February 21, 2022