ಮುಂಬೈ: ಟೀಂ ಇಂಡಿಯಾದ ಆಲ್ರೌಂಡರ್ ಆರ್. ಅಶ್ವಿನ್ (R. Ashwin) ಗೆ ಕೊರೋನಾ ಪಾಸಿಟಿವ್ (Corona Positive) ಆಗಿದ್ದು, ಇಂಗ್ಲೆಂಡ್ ಗೆ ವಿರುದ್ಧದ ಟೆಸ್ಟ್ ಪಂದ್ಯವನ್ನಾಡಲು ತಡವಾಗಿ ತೆರಳಲಿದ್ದಾರೆ.
ಜುಲೈ 1 ರಿಂದ 5 ರವರೆಗೆ ಇಂಗ್ಲೆಂಡ್ (England) ವಿರುದ್ಧ ಎಡ್ಜ್‌ಬಾಸ್ಟನ್ ನಲ್ಲಿ ಟೆಸ್ಟ್ (Edgbaston Test) ಪಂದ್ಯ ನಡೆಯಲಿದೆ. ಈ ಪಂದ್ಯವನ್ನಾಡಲು ಜೂನ್ 16 ರಂದೇ ಟೀಂ ಇಂಡಿಯಾದ ಆಟಗಾರರು ಇಂಗ್ಲೆಂಡ್ ಗೆ ತೆರಳಿದ್ದರು. ಮರುದಿನ ನಾಯಕ ರೋಹಿತ್ ಶರ್ಮಾ ತಂಡವನ್ನು ಕೂಡಿಕೊಂಡಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಪಾಲ್ಗೊಂಡಿದ್ದ ಕೋಚ್ ರಾಹುಲ್ ದ್ರಾವಿಡ್, ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಅವರು ಇಂದು ಲಂಡನ್ ಗೆ ತೆರಳುತ್ತಿದ್ದಾರೆ.
ಆದರೆ ಅಶ್ವಿನ್ ಅವರಿಗೆ ಕೊರೋನಾ ಪಾಸಿಟಿವ್ ಆಗಿರುವ ಹಿನ್ನೆಲೆಯಲ್ಲಿ ಅವರು ತಂಡದೊಂದಿಗೆ ಇಂಗ್ಲೆಂಡ್ ಗೆ ತೆರಳಿಲ್ಲ. ಅವರು ಕ್ವಾರೆಂಟೇನ್ ಆಗಿದ್ದು, ಕೋವಿಡ್ ನಿಯಮಾವಳಿಗಳ ಪ್ರಕಾರ ಅವರು ಕೋವಿಡ್ ಮುಕ್ತರಾದ ಬಳಿಕ ಇಂಗ್ಲೆಂಡ್ ಗೆ ತೆರಳಲಿದ್ದಾರೆ. ಅವರು ಜುಲೈ 1 ರಿಂದ ಆರಂಭವಾಗಲಿರುವ ಟೆಸ್ಟ್ ಪಂದ್ಯಕ್ಕೆ ಲಭ್ಯರಾಗುವ ಸಾಧ್ಯತೆ ಇದೆ. ಆದರೆ ಅವರು ಟೆಸ್ಟ್ ಪಂದ್ಯಕ್ಕೂ ಮುನ್ನ ನಡೆಯಲಿರುವ ಅಭ್ಯಾಸ ಪಂದ್ಯದಲ್ಲಿ ಆಡುವುದಿಲ್ಲ ಎಂದು ಬಿಸಿಸಿಐನ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಶಿವಸೇನೆಯಲ್ಲಿ ಮಹಾ ಬಂಡಾಯದ ಬಿರುಗಾಳಿ..! MVA ಸರ್ಕಾರ ಪತನ…? ಮಹಾರಾಷ್ಟ್ರದಲ್ಲಿ ಶೀಘ್ರವೇ ಬಿಜೆಪಿ ಅಧಿಕಾರಕ್ಕೆ…
ಇನ್ನು ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿರುವ ತಂಡ ವಿವಿಎಸ್ ಲಕ್ಷ್ಮಣ್ ಅವರ ನೇತೃತ್ವದಲ್ಲಿ ಜೂನ್ 23 ಅಥವಾ 24 ರಂದು ಐರ್ಲೆಂಡ್ (Ireland) ಗೆ ತೆರಳಲಿದೆ. ಜೂನ್ 26 ಮತ್ತು 28 ರಂದು ಐರ್ಲೆಂಡ್ ವಿರುದ್ಧ 2 ಟಿ20 ಪಂದ್ಯಗಳು ನಡೆಯಲಿದೆ.
ಕಳೆದ ವರ್ಷ ಟೀಂ ಇಂಡಿಯಾ 5 ಟೆಸ್ಟ್ ಪಂದ್ಯಗಳ ಸರಣಿಯನ್ನಾಡಲು ಇಂಗ್ಲೆಂಡ್ ಗೆ ತೆರಳಿತ್ತು. ಆದರೆ ಸರಣಿಯ 5 ನೇ ಟೆಸ್ಟ್ ಕೊರೋನಾ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಈಗ ಈ ಟೆಸ್ಟ್ ಪಂದ್ಯವನ್ನಾಡಲು ಟೀಂ ಇಂಡಿಯಾ ಇಂಗ್ಲೆಂಡ್ ಗೆ ತೆರಳುತ್ತಿದೆ. ಸದ್ಯ ಟೀಂ ಇಂಡಿಯಾ ಸರಣಿಯಲ್ಲಿ 2-1 ರಿಂದ ಮುನ್ನಡೆ ಸಾಧಿಸಿದೆ. ಈ ಟೆಸ್ಟ್ ಪಂದ್ಯದ ಬಳಿಕ ಭಾರತ ಮತ್ತು ಇಂಗ್ಲೆಂಡ್ ನಡುವೆ 3 ಏಕದಿನ ಮತ್ತು 3 ಟಿ20 ಪಂದ್ಯಗಳು ನಡೆಯಲಿವೆ.
ಇದನ್ನೂ ಓದಿ: ಕಳೆದ ಒಂದು ವಾರದಲ್ಲಿ ಕೊರೋನಾ ಕೇಸ್ ಏರಿಕೆ… ಮಹದೇವಪುರದಲ್ಲಿ ಅತಿ ಹೆಚ್ಚು ಸೋಂಕಿತರು ಪತ್ತೆ…