ಕಲಬುರಗಿ: ಶಿಕ್ಷಕ ವರ್ಗಾವಣೆಗೊಂಡಿದ್ದು ಬೀಳ್ಕೊಡುಗೆ ವೇಳೆ ಶಿಕ್ಷಕರು ಮತ್ತು ವಿದ್ಯಾರ್ಥಿನಿಯರು ಗಳಗಳನೆ ಅತ್ತಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲಾತಾಣದಲ್ಲಿ ಭಾರೀ ವೈರಲ್ ಆಗಿದೆ.
ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಲಿಂಗಂಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಕ ರಾಘವೇಂದ್ರ ಕುಲಕರ್ಣಿ ವರ್ಗಾವಣೆಯಾದ ಹಿನ್ನಲೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿನಿಯರ ಅಚ್ಚುಮೆಚ್ಚಿನ ಶಿಕ್ಷಕ ಹಾಗೂ ಸಹೋದ್ಯೋಗಿಗಳ ಜೊತೆ ಉತ್ತಮ ಸಂಬಂಧ ಹೊಂದಿದ್ದ ಶಿಕ್ಷಕ ರಾಘವೇಂದ್ರ ಕುಲಕರ್ಣಿ, ಶಾಲೆ ಬಿಟ್ಟು ತೆರಳುತ್ತಿರುವಾಗ ಮನನೊಂದ ವಿದ್ಯಾರ್ಥಿನಿಯರು ಮತ್ತು ಶಿಕ್ಷಕರು ಗಳಗಳನೆ ಅತ್ತಿದ್ದು, ಶಿಕ್ಷಕನ ವಿದಾಯದ ವೇಳೆ ವಿದ್ಯಾರ್ಥಿಗಳ ಕಣ್ಣಿರಿನಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಪ್ರತಿಷ್ಠಿತ ಮಂತ್ರಿ ಮಾಲ್ಗೆ ಬಿಗ್ ರಿಲೀಫ್…! ಮಾಲ್ ಬಾಗಿಲು ತೆರೆಯಲು ಹೈಕೋರ್ಟ್ ಅನುಮತಿ…!