ಬೆಂಗಳೂರು : ತಮಿಳುನಾಡಿನಲ್ಲಿ ಓಮಿಕ್ರಾನ್ ಮಹಾಸ್ಫೋಟವಾಗಿದ್ದು. ಒಂದೇ ದಿನ 33 ಪ್ರಕರಣ ಪತ್ತೆಯಾಗಿದೆ. ಈ ಮೂಲಕ ತಮಿಳುನಾಡಲ್ಲಿ ಸೋಂಕಿತರ ಸಂಖ್ಯೆ 34ಕ್ಕೆ ಏರಿಕೆಯಾಗಿದೆ.
ವಿದೇಶದಿಂದ ಬಂದಿದ್ದವರಲ್ಲಿ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿದ್ದು, ಚೆನ್ನೈನ 26 ಮಂದಿ, ಸೇಲಂನ ಒಬ್ಬರು, ಮಧುರೈನ ನಾಲ್ವರಲ್ಲಿ ಹಾಗೂ ತಿರುವಣ್ಣಾಮಲೈನಲ್ಲಿ ಇಬ್ಬರಲ್ಲಿ ಸೋಂಕು ಪತ್ತೆಯಾಗಿದ್ದು, ಜೀನೋಮ್ ಸೀಕ್ವೆನ್ಸಿಂಗ್ ಟೆಸ್ಟ್ನಿಂದ ಓಮಿಕ್ರಾನ್ ವೈರಸ್ ಪತ್ತೆಯಾಗಿದೆ. ವಿದೇಶದಿಂದ ಬಂದಿದ್ದ 104 ಮಂದಿ ಕೊರೋನಾ ಪಾಸಿಟಿವ್ ಆಗಿದ್ದರು, 82 ಪ್ರಯಾಣಿಕರನ್ನ ISCRM ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ : ಮಸೀದಿಗಳ ಮೇಲಿನ ಧ್ವನಿವರ್ಧಕ ತೆರವಿಗೆ ರಾಜ್ಯ ಹೈಕೋರ್ಟ್ ನೋಟಿಸ್..ವಿಶೇಷ ದಿನ, ಸಂದರ್ಭಗಳಲ್ಲಿ ಮಾತ್ರ ಬಳಕೆಗೆ ಅನುಮತಿ…