ಬೆಂಗಳೂರು : ತಲಘಟ್ಟಪುರ ಪೊಲೀಸರ ಬಲೆಗೆ ಓಜಿ ಕುಪ್ಪಂ ಗ್ಯಾಂಗ್ ಬಿದಿದ್ದು, ಕಾರ್ ಗ್ಲಾಸ್ ಒಡೆದು ಬಂಗಾರ ಕದ್ದೊಯ್ದಿದ್ದ ಗ್ಯಾಂಗ್ನ್ನು ಪೊಲೀಸರು ಬಂಧಿಸಿದ್ದಾರೆ.
ವ್ಯಕ್ತಿಯೊಬ್ಬರು ಬ್ಯಾಂಕ್ನಿಂದ ಆಭರಣವನ್ನು ಬಿಡಿಸಿಕೊಂಡು ಬರುತ್ತಿದ್ದ ವೇಳೆ ಓಜಿ ಕುಪ್ಪಂ ಗ್ಯಾಂಗ್ ಬ್ಯಾಂಕ್ನಿಂದ ವ್ಯಕ್ತಿಯನ್ನ ಫಾಲೋ ಮಾಡಿ ಅಟೆನ್ಷನ್ ಡೈವರ್ಟ್ ಮಾಡಿ ಕಳ್ಳತನ ಮಾಡಿದ್ದರು. ರತ್ನಕುಮಾರ್ @ರೆಡ್ಡಿ, ಫಾತಿಮ ಬಂಧಿತ ಆರೋಪಿಗಳಾಗಿದ್ದಾರೆ. ತಲಘಟ್ಟಪುರ ಪೊಲೀಸರು ಈ ಆರೋಪಿಗಳನ್ನ ಬಂಧಿಸಿದ್ದಾರೆ. ಪೊಲೀಸರು ಬಂಧಿತರಿಂದ 1 ಕೋಟಿ 22 ಲಕ್ಷ ಮೌಲ್ಯದ 1kg 170ಗ್ರಾಂ ಚಿನ್ನ,186 ಗ್ರಾಂ ವಜ್ರದ ಆಭರಣ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ : ಜಮ್ಮುವಿನಲ್ಲಿ ಆಜಾನ್ ವಿರೋಧಿಸಿ ಕಾಲೇಜು ವಿದ್ಯಾರ್ಥಿಗಳಿಂದ ಹನುಮಾನ್ ಚಾಲೀಸಾ ಪಠಣ..!