ಮೈಸೂರು : ತಿ.ನರಸೀಪುರ ತಾಲೂಕಿನಲ್ಲಿ ಚಿರತೆ ಹಾವಳಿ ನಿಲ್ಲುತ್ತಿಲ್ಲ. ಚಿರತೆ 11ವರ್ಷದ ಯುವಕನನ್ನ ಬಲಿ ಪಡೆದು ದೇಹವನ್ನು ಹೊತ್ತೊಯ್ದಿದೆ.
ಈ ಘಟನೆ ತಾಲೂಕಿನ ಹೊರಳಹಳ್ಳಿ ಗ್ರಾಮದಲ್ಲಿ ತಡರಾತ್ರಿ ನಡೆದಿದ್ದು, ಹೊರಳಹಳ್ಳಿ ಗ್ರಾಮದ 11 ವರ್ಷದ ಜಯಂತ್ ಮೃತ ಪಟ್ಟಿದ್ದಾರೆ. ಗ್ರಾಮಸ್ಥರು ಜಯಂತ್ ಶವಕ್ಕಾಗಿ ರಾತ್ರಿಯೆಲ್ಲಾ ಹುಡುಕಾಟ ನಡೆಸುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು, ಶಾಸಕರು, ಜಿಲ್ಲಾಧಿಕಾರಿಗಳು ಹೊರಳಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಡಿಸಿ ಕೆ.ವಿ. ರಾಜೇಂದ್ರ ಮೃತ ವ್ಯಕ್ತಿಯ ಬಾಲಕನ ಶವ ಪತ್ತೆ ಹಚ್ಚುವ ಭರವಸೆ ನೀಡಿದ್ದಾರೆ. ಹೊರಳಹಳ್ಳಿ ಗ್ರಾಮದಲ್ಲಿ ಪ್ರಸ್ತುತ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.
ಇದನ್ನೂ ಓದಿ :ದೈನಂದಿನ ರಾಶಿ ಭವಿಷ್ಯ..! 22/01/22