ದಿವಂಗತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜಪೂತ್ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಆರೋಪಪಟ್ಟಿ ದಾಖಲಿಸಿದೆ. NCB ಚಾರ್ಜ್ ಶೀಟ್ ನಲ್ಲಿ ಒಟ್ಟು 33 ಆರೋಪಿಗಳ ಹೆಸರನ್ನು ಶಾಮೀಲುಗೊಳಿಸಿದೆ. ಈ ಚಾರ್ಚ್ ಶೀಟ್ನಲ್ಲಿ ಖ್ಯಾತ ಬಾಲಿವುಡ್ ನಟಿಮಣಿಯರಾಗಿರುವ ದೀಪೀಕಾ ಪಡುಕೋಣೆ, ಶ್ರದ್ಧಾ ಕಪೂರ್ ಹಾಗೂ ಸಾರಾ ಅಲಿ ಖಾನ್ ಅವರ ಹೇಳಿಕೆಗಳನ್ನು ಕೂಡ ಶಾಮೀಲು ಮಾಡಲಾಗಿದೆ. ಆದ್ರೆ, ಇವರನ್ನು ಪ್ರಕರಣದಲ್ಲಿ ಆರೋಪಿಗಳನ್ನಾಗಿ ಮಾಡಲಾಗಿಲ್ಲ ಹಾಗೂ ಕೇವಲ ಅವರ ಹೇಳಿಕೆಗಳನ್ನು ಮಾತ್ರ ದಾಖಲಿಸಲಾಗಿದೆ ಎಂಬುದುವನ್ನ ಉಲೇಖಿಸಲಾಗಿದೆ.
30 ಸಾವಿರ ಪುಟಗಳ ಚಾರ್ಜ್ ಶೀಟ್.!
ಸುಶಾಂತ್ ಸಿಂಗ್ ರಾಜಪೂತ್ ಸಾವಿನ ಬಳಿಕ ಡ್ರಗ್ಸ್ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಆರೋಪ ಪಟ್ಟಿ ದಾಖಲಿಸಲು ಸೆಷನ್ಸ್ ಕೋರ್ಟ್ ತಲುಪಿದ್ದರು. ಮೂಲಗಳಿಂದ ದೊರೆತ ಮಾಹಿತಿ ಪ್ರಕಾರ ಈ ಚಾರ್ಜ್ ಶೀಟ್ 30 ಸಾವಿರಕ್ಕೂ ಅಧಿಕ ಪುಟಗಳದ್ದಾಗಿದೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ಇದುವರೆಗೆ ಸುಶಾಂತ್ ಜೊತೆ ನಿಕಟ ಸಂಪರ್ಕ ಹೊಂದಿರುವ ನಟಿ ಸೇರಿದಂತೆ ಆಕೆಯ ಸಹೋದರ, ಮ್ಯಾನೇಜರ್, ಡ್ರಗ್ಸ್ ಪೆಡ್ಲರ್ ಸೇರಿದಂತೆ ಒಟ್ಟು 33 ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದೆ. ತೆನಿಖೆಯ ವೇಳೆ ಜಪ್ತಿ ಮಾಡಲಾಗಿರುವ ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ ಇತರೆ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಲಾಗಿದೆ.
ಯಾರು ಈ ಆರೋಪಿಗಳು.?
33 ಆರೋಪಿಗಳ ಪಟ್ಟಿಯಲ್ಲಿ ನಟಿ ಹಾಗೂ ಸುಶಾಂತ್ ಸಿಂಗ್ ಗರ್ಲ್ ಫ್ರೆಂಡ್ ಎನ್ನಲಾಗಿರುವ ರಿಯಾ ಚಕ್ರವರ್ತಿ, ಆಕೆಯ ಸಹೋದರ ಶೋವಿಕ್ ಚಕ್ರವರ್ತಿ, ಸ್ಯಾಮ್ಯುಯೆಲ್ ಮಿರಾಂಡಾ, ಜೈದ್ ವೆಲಾತ್ರಾ, ಬಾಸಿತ್ ಪರಿಹಾರ, ಸುರ್ಯದೀಪ್ ಮಲ್ಹೊತ್ರಾ, ಕೈಜಾನ್ ಇಬ್ರಾಹಿಮ್, ಅಬ್ಬಾಸ್ ಲಖಾನಿ, ಕರಣ್ ಆರೋರಾ ಹಾಗೂ ಗೌರವ್ ಆರ್ಯ ಅವರುಗಳ ಹೆಸರು ಶಾಮೀಲಾಗಿದೆ.
ಬಾಲಿವುಡ್ ಸ್ಟಾರ್ ಏನ್ ಹೇಳಿದ್ದಾರೆ.?
ಈ ಚಾರ್ಜ್ ಶೀಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 33 ಜನರ ಹೆಸರು ಶಾಮೀಲಾಗಿದ್ದು, ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್ ಹಾಗೂ ಸಾರಾ ಅಲಿ ಖಾನ್ ಹೇಳಿಕೆಗಳನ್ನು ಶಾಮೀಲುಗೊಳಿಸಲಾಗಿದೆ. ಆದರೆ, ಇವರನ್ನು ಆರೋಪಿಗಳ ಪಟ್ಟಿಯಿಂದ ಹೊರಗಿಡಲಾಗಿದ್ದು, ಕೇವಲ ಅವರ ಹೇಳಿಕೆಗಳನ್ನು ಮಾತ್ರ ಶಾಮೀಲುಗೊಳಿಸಲಾಗಿದೆ.