ಉತ್ತರ ಪ್ರದೇಶ: ಉತ್ತರ ಪ್ರದೇಶದ ಕಾಶಿಯ ಜ್ಞಾನವಾಪಿ ಮಸೀದಿ ವ್ಯಾಪ್ತಿಯಲ್ಲಿ ಸರ್ವೆ ಕಾರ್ಯ ಆರಂಭವಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಸಮೀಕ್ಷೆ ಮಾಡಲಾಗುತ್ತಿದೆ.
500 ಮೀಟರ್ ವ್ಯಾಪ್ತಿಯ ಅಂಗಡಿಗಳು ಸೇರಿದಂತೆ ಎಲ್ಲವನ್ನೂ 51 ಅಧಿಕಾರಿಗಳ ತಂಡ ಸಮೀಕ್ಷೆ ಮಾಡುತ್ತಿದೆ. ವಿಡಿಯೋ ಸರ್ವೆ ಮಾಡಲು ವಾರಾಣಸಿ ಕೋರ್ಟ್ ಅನುಮತಿ ನೀಡಿತ್ತು. ಸರ್ವೆ ಕಾರ್ಯಕ್ಕೆ ಈ ಹಿಂದೆ ಮುಸ್ಲಿಂ ಸಮುದಾಯ ವಿರೋಧ ವ್ಯಕ್ತಪಡಿಸಿದ್ದ ಕಾರಣ ವಿವಾದ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಜ್ಞಾನವ್ಯಾಪಿ ಮಸೀದಿ ಒಳಗೆ ಶಿವ ಮತ್ತು ನಂದಿಯ ವಿಗ್ರಹಗಳಿವೆ ಎನ್ನುವ ವಾದವನ್ನು ಹಿಂದೂ ಸಮುದಾಯ ಮಾಡುತ್ತಿದೆ. ಇದೀಗ ಸರ್ವೆಯಲ್ಲಿ ಹಿಂದೂ ದೇವರ ಕುರುಹು ಸಿಗಲಿದೆಯಾ ಎನ್ನುವ ಕುತೂಹಲ ಮನೆ ಮಾಡಿದೆ.
ಇದನ್ನೂ ಓದಿ:ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೂರು ದಿನಗಳ ರಾಜ್ಯ ಪ್ರವಾಸ : ಉಡುಪಿಗೆ ಆಗಮನ…!