ಕೃಷಿ ಮಸೂದೆ ಕಾಯ್ದೆ ಜಾರಿಗೊಳಿಸಲು ಮುಂದಾಗಿದ್ದ ಕೇಂದ್ರಸರ್ಕಾರದ ನಿರ್ಧಾರಕ್ಕೆ ಸುಪ್ರೀಂ ತಾತ್ಕಾಲಿಕ ತಡೆ ನೀಡಿದೆ. ದೆಹಲಿಯ ಗಡಿಯಲ್ಲಿ 48 ದಿನಗಳಿಂದ ನಡೆಯುತ್ತಿದ್ದ ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸುಪ್ರೀಂ ಈ ತೀರ್ಪು ನೀಡಿದೆ. ಶೀಘ್ರ 4 ಸದಸ್ಯರ ಸಮಿತಿಯನ್ನು ರಚಿಸಿ ಕಾಯ್ದೆ ಪರಿಶೀಲಿಸಿದ ನಂತರ ಮುಂದಿನ ತೀರ್ಮಾನ ತಿಳಿಸಿಲಿದೆ. ಅಲ್ಲಿಯವರೆಗೆ ದೇಶಾದ್ಯಂದ ಸಂಚಲನ ಮೂಡಿದ್ದ ಕೃಷು ಕಾಯ್ದೆಗೆ ತಾತ್ಕಾಲಿ ತಡೆ ಬಿದ್ದಿದೆ.
ಸಂಸತ್ತು ಅಂಗೀಕರಿಸುವ ಮೂರು ಕೃಷಿ ಕಾಯ್ದೆ ಮತ್ತು ಪ್ರತಿಭಟನಾ ಕಾರ ರೈತರನ್ನು ದೆಹಲಿಯ ಗಡಿಯಿಂದ ತೆರವು ಮಾಡಬೇಕು ಎಂದು ಸಲ್ಲಿಸಿದ್ದ ಹಲವು ಅರ್ಜಿಗಳನ್ನು ಸುಪ್ರಿಂ ಕೋರ್ಟ್ ಇಂದು ವಿಚಾರಣೆ ನಡೆಸಿದ ನ್ಯಾಯಲಯ ಈ ತಿರ್ಪು ನೀಡಿದೆ. ವಾದ ವಿವಾದಗಳ ನಡುವೆ ಸುಪ್ರಿಂ ಕೋರ್ಟ್ ಸದ್ಯ ಮೂರು ಕಾಯ್ದೆಗಳಿಗೆ ಮುಂದಿನ ಅದೇಶದವರೆಗೆ ತಡೆ ನೀಡಿದೆ.
ರೈತ ಹಾಗೂ ಕೇಂದ್ರ ಸರ್ಕಾರದ ನಡುವುನ ಬಿಕ್ಕಟ್ಟನ್ನು ಬಗೆಹರಿಸಲು ಸಮಿತಿ ರಚಿಸುವುದಾಗಿ ತಿಳಿಸಿದ ಸುಪ್ರಿಂ ಕೋರ್ಟ್ ’ನಾವು ಸಮಿತಿಯೊಂದನ್ನು ರಚಿಸುತ್ತಿದ್ದೇವೆ ಇದರಿಂದ ಸ್ಪಷ್ಟ ಚಿತ್ರಣ ದೊರೆಯಲಿದೆ. ಮತ್ತು ಈ ಸಮಿತಿ ರಚನೆಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ . ಏನಾದ್ರು ಸಮಸ್ಯೆ ಇದ್ದರೆ ಸಮಿತಿಯೊಂದಿಗೆ ಹೇಳಿ ಬಗೆಹರಿಸಿಕೊಳ್ಳಬಹುದು ಎಂದು ಹೇಳಿದೆ.