ಬೆಂಗಳೂರು: ಬೇಸಿಗೆ ಕಾಲ ಬಂತೂ ಅಂದ್ರೆ ಸಾಕು ಹೆಣ್ಣುಮಕ್ಕಳು ತಮ್ಮ ತ್ವಚೆಯ ಆರೈಕೆ ಮಾಡಿಕೊಳ್ಳೋದು ಬಹಳ ಮುಖ್ಯ. ಸ್ವಲ್ಪ ಅಜಾಗರೂಕತೆ ವಹಿಸಿದ್ರೂ ಚರ್ಮದ ಸಮಸ್ಯೆ, ಮುಖದಲ್ಲಿ ಕಪ್ಪು ಕಲೆಗಳು, ಡಾರ್ಕ್ ಸರ್ಕಲ್‌ಗಳು ಕಾಣಿಸಿಕೊಳ್ಳುತ್ತವೆ. ಹೀಗಾದಾಗ ಸೌಂದರ್ಯ ಕಾಪಾಡಿಕೊಳ್ಳಲು ಏನ್ ಮಾಡಬೇಕು ಅಂತ ಯೋಚನೆ ಮಾಡತ್ತೀದ್ದೀರಾ ಹಾಗಿದ್ರೆ ಮಿಸ್ ಮಾಡದೇ ಈ ಸ್ಟೋರಿ ಓದಿ…
ಬೇಸಿಗೆಯಲ್ಲಿ ತ್ವಚೆಯ ಹೊಳಪನ್ನು ಕಾಪಾಡಿಕೊಳ್ಳಲು ದುಬಾರಿ ಉತ್ಪನ್ನಗಳನ್ನು ಬಳಸುತ್ತಿರಾ. ಅದೆಲ್ಲಕ್ಕಿಂತ ಅಗ್ಗದ ಮತ್ತು ಉತ್ತಮ ಪರಿಹಾರ ಕೊಡುವ ಉತ್ಪನ್ನವೊಂದು ಇದೆ. ಅದೇನಪ್ಪಾ ಅಂತೀರಾ… ಅಲೋವೆರಾ.. ಅಲೋವೆರಾ ಜೆಲ್ಅನ್ನು ದಶಕಗಳಿಂದ ಮನೆಮದ್ದಾಗಿ ಬಳಸಲಾಗುತ್ತಿದೆ. ಇದು ಹತ್ತು ಹಲವಾರು ಪ್ರಯೋಜನಗಳನ್ನು ಹೊಂದಿದೆ. ಅಲೋವೆರಾ ಅನೇಕ ಚರ್ಮದ ಸಮಸ್ಯೆಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಮೊಡವೆ, ಕಪ್ಪು ಕಲೆಗಳು ಮತ್ತು ಸುಕ್ಕುಗಳಿಂದ ಪಿಗ್ಮೆಂಟೇಶನ್ ವರೆಗೆ, ಅಲೋವೆರಾ ಪರಿಣಾಮಕಾರಿ ಪರಿಹಾರ ನೀಡುತ್ತದೆ. ಇದೆಲ್ಲದರ ಹೊರತಾಗಿ ತ್ವಚೆಗೆ ಅಲೋವೆರಾದಿಂದ ಹಲವು ಪ್ರಯೋಜನಗಳಿವೆ. ಅದು ಯಾವುದೆಲ್ಲಾ ತಿಳಿದುಕೊಳ್ಳೋಣ.
ಕಪ್ಪು ಕಲೆಗಳನ್ನು ಹೋಗಲಾಡಿಸುತ್ತೆ: ಕಣ್ಣುಗಳ ಕೆಳಗಿರುವ ಚರ್ಮವು ಸಾಮಾನ್ಯಕ್ಕಿಂತ ಗಾಢವಾಗಿ ಕಾಣಿಸಿಕೊಂಡಾಗ ಕಪ್ಪು ವಲಯಗಳು ಸಂಭವಿಸುತ್ತೆ. ಈ ಸಮಸ್ಯೆಯು ಸಾಮಾನ್ಯವಾಗಿ ಒತ್ತಡ, ನಿದ್ರೆಯ ಕೊರತೆ ಮತ್ತು ಕೆಫೀನ್‌ನ ಅತಿಯಾದ ಸೇವನೆಯಿಂದ ಬರುತ್ತದೆ. ಕಣ್ಣುಗಳ ಕೆಳಗೆ ಅಲೋವೆರಾ ಜೆಲ್ ಅನ್ನು ಬಳಸುವುದು ಪಫಿನೆಸ್ ಮತ್ತು ಡಾರ್ಕ್ ಸರ್ಕಲ್‌ಗಳಿಂದ ಪರಿಹಾರವನ್ನು ನೀಡುತ್ತೆ.
ಮೊಡವೆಗಳನ್ನು ತೊಡೆದು ಹಾಕುತ್ತೆ : ಬೇಸಿಗೆಯಲ್ಲಿ ಬಿಸಿಲಿನಿಂದಾಗಿ ಮುಖದಲ್ಲಿ ಮೊಡವೆಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾದದು. ಎಣ್ಣೆಯುಕ್ತ ಚರ್ಮ ಹೊಂದಿರುವ ಜನರಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತೆ. ಅಲೋವೆರಾ ಜೆಲ್ ಅದಕ್ಕೆ ರಾಮಬಾಣವಾಗಿದೆ. ಅಲೋವೆರಾದಲ್ಲಿ ಬಹಳಷ್ಟು ಸ್ಯಾಲಿಸಿಲಿಕ್ ಆಮ್ಲವಿದೆ. ಇದು ಮೊಡವೆಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತೆ.
ಉತ್ತಮ ಫೇಸ್‌ಪ್ಯಾಕ್ ಆಗಿದೆ : ವಿಟಮಿನ್ ಇ ಮತ್ತು ಸಿ ಯಲ್ಲಿ ಸಮೃದ್ಧವಾಗಿರುವ ಅಲೋವೆರಾ ನಮ್ಮ ಚರ್ಮದಲ್ಲಿ ಕಾಲಜನ್ ರೂಪಿಸುವ ಕೋಶಗಳನ್ನು ಹೆಚ್ಚಿಸುತ್ತೆ. ಇದನ್ನು ವಯಸ್ಸಿನ ವಿರೋಧಿ ಫೇಸ್ ಪ್ಯಾಕ್ ಆಗಿಯೂ ಬಳಸಬಹುದು. 1 ಚಮಚ ಅಲೋವೆರಾ ಜೆಲ್ ಅನ್ನು ಹಾಲು ಮತ್ತು 1 ಚಮಚ ಜೇನುತುಪ್ಪದೊಂದಿಗೆ ಮಿಶ್ರಣ ಮಾಡಿ. ಸ್ಥಿರತೆಯನ್ನು ಸುಧಾರಿಸಲು ನೀವು ಕೆಲವು ಹನಿ ರೋಸ್ ವಾಟರ್ ಅನ್ನು ಕೂಡ ಸೇರಿಸಬಹುದು. ಈ ಫೇಸ್ ಮಾಸ್ಕ್ ಅನ್ನು ನಿಮ್ಮ ಮುಖ ಮತ್ತು ಕುತ್ತಿಗೆಯ ಎಲ್ಲಾ ಭಾಗಗಳಿಗೆ ಹಚ್ಚಿ ಮತ್ತು 20 ನಿಮಿಷಗಳ ಕಾಲ ಬಿಡಿ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ ಆಗ ಅಂದದ ಮುಖ ನಿಮ್ಮದಾಗುತ್ತೆ.
ಮೇಕಪ್ ರಿಮೂವರ್ ಆಗಿ ಕೆಲಸ ಮಾಡುತ್ತೆ : ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಕ್ಲೆನ್ಸರ್‌ಗಳು ಮತ್ತು ಮೇಕಪ್ ರಿಮೂವರ್‌ಗಳು ಲಭ್ಯವಿದೆ. ಆದರೆ ಈ ಎಲ್ಲಾ ಉತ್ಪನ್ನಗಳು ಅನುಕೂಲಗಳು ಮತ್ತು ಅನಾನುಕೂಲಗಳನ್ನು ಹೊಂದಿವೆ. ನೀವು ಅವುಗಳನ್ನು ದೀರ್ಘ ಕಾಲದವರೆಗೆ ಬಳಸಿದರೆ, ಅವು ನಿಮ್ಮ ಚರ್ಮವನ್ನು ಇನ್ನಷ್ಟು ಹದಗೆಡಿಸಬಹುದು. ಆದರೆ ಅಂಥಾ ಸಂದರ್ಭದಲ್ಲಿ, ಅಲೋವೆರಾ ಜೆಲ್ ನೈಸರ್ಗಿಕವಾಗಿ ನಿಮ್ಮ ಚರ್ಮವನ್ನು ಸ್ವಚ್ಛಗೊಳಿಸಲು ಮತ್ತು ಮೇಕಪ್ ಅನ್ನು ತೆಗೆದು ಹಾಕಲು ಕೆಲಸ ಮಾಡುತ್ತದೆ. ಇದರಿಂದ ಚರ್ಮವು ಹೊಳೆಯುವಂತೆ ಮಾಡುತ್ತೆ.
ಇದನ್ನೂ ಓದಿ : ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವಿನ ಸಂಭ್ರದಲ್ಲಿದ್ದ ಕೆ.ಎಲ್. ರಾಹುಲ್ ಗೆ ಆಘಾತ… 24 ಲಕ್ಷ ರೂ. ದಂಡ…