ಬೆಂಗಳೂರು: ಸುಮ್ಮನಹಳ್ಳಿ ವಿದ್ಯುತ್ ಚಿತಾಗಾರದಲ್ಲಿ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಚಿತಾಗಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯ ಸುಮ್ಮನಹಳ್ಳಿ ವಿದ್ಯುತ್ ಚಿತಾಗಾರದಲ್ಲಿ Horizontal Coil Mounting ವಿನ್ಯಾಸದಿಂದ Vertical Coil Mounting ವಿನ್ಯಾಸಕ್ಕೆ ಬದಲಿಸುವ ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೇ 15 ರಿಂದ ಜೂನ್ 28 ರವರೆಗೂ 45 ದಿನಗಳ ಕಾಲ ಚಿತಾಗಾರ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ.
ಇದನ್ನೂ ಓದಿ: ವಿಕಲಚೇತನ ಯುವಕನ ಮನವಿಗೆ ಸ್ಪಂದಿಸಿದ ಸಿಎಂ ಬೊಮ್ಮಾಯಿ… ಎಲೆಕ್ಟ್ರಿಕ್ ವೆಹಿಕಲ್ ಕೊಡಿಸುವಂತೆ ಡಿಸಿಗೆ ಸೂಚನೆ…
ಸುಮ್ಮನಹಳ್ಳಿ ಚಿತಾಗಾರ ಸ್ಥಗಿತಗೊಳ್ಳಲಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಮೀಪದ ಪೀಣ್ಯ, ಮೇಡಿ ಅಗ್ರಹಾರ ಅಥವಾ ಕೆಂಗೇರಿ ವಿದ್ಯುತ್ ಚಿತಾಗಾರವನ್ನು ಉಪಯೋಗಿಸಿಕೊಳ್ಳುವಂತೆ ಬಿಬಿಎಂ ಪಿ ಮನವಿ ಮಾಡಿದ್ದು, ಈ ಸಂಬಂಧ ರಾಜರಾಜೇಶ್ವರಿ ನಗರ ವಲಯ ವಿದ್ಯುತ್ ವಿಭಾಗದ EE ಪ್ರಕಟಣೆ ಹೊರಡಿಸಿದ್ದಾರೆ.