ಹಾಸನ: ಸಾಧಿಸುವವನಿಗೆ ಎಷ್ಟೆ ಅಡೆ ತಡೆಗಳು ಬಂದರೂ ಅದನ್ನು ಆತ ಮೆಟ್ಟಿ ನಿಲ್ಲುತ್ತಾನೆ ಎಂಬ ಮಾತು ಸುಹಾಸ್ ಎಲ್ ಯತಿರಾಜ್ ನಿಜ ಮಾಡಿ ತೋರಿಸಿದ್ದಾರೆ. ಕಾಲಿನಲ್ಲಿ ಸ್ವಲ್ಪ ಊನ ಇರುವ ವ್ಯಕ್ತಿ ಇಂದು ಪ್ಯಾರಾಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದು ತೋರಿಸಿದ್ದಾರೆ. ಟೋಕಿಯೋ ಪ್ಯಾರಾಲಿಂಪಿಕ್ಸ್ನಲ್ಲಿ ಕರ್ನಾಟಕದ ಸುಹಾಸ್ ಅವರು ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದು ಕರ್ನಾಟಕಕ್ಕೆ ಹೆಮ್ಮೆಯ ಗರಿ ಮೂಡಿಸಿದ್ದಾರೆ.
ಇದನ್ನೂ ಓದಿ: 10 ವರ್ಷದ ಬಾಲಕನನ್ನ ಕೊಲೆ ಮಾಡಿ ತನಗೇನೂ ಗೊತ್ತಿಲ್ಲದಂತೆ ನಾಟಕವಾಡಿದ್ದ ರೌಡಿಶೀಟರ್ ಅರೆಸ್ಟ್…
ಟೋಕಿಯೋ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಿದ ಸುಹಾಸ್ ಎಲ್ ಯತಿರಾಜ್ ಯಾರು? ಅವರ ಹಿನ್ನೆಲೆ ಏನು ಎಂಬ ಕುತೂಹಲ ಸದ್ಯ ಎಲ್ಲರಲ್ಲೂ ಮನೆ ಮಾಡಿದೆ. ಹಾಸನದ ಅರಸೀಕೆರೆಯ ಲಾಳನಕೆರೆ ಗ್ರಾಮದಲ್ಲಿ 1983, ಜುಲೈ 2ರಂದು ಜನಸಿದ ಇವರ ತಂದೆ ತಾಯಿ ಯತಿರಾಜ್ ಮತ್ತು ಜಯಶ್ರೀ. 38ವರ್ಷದ ಸುಹಾಸ್ ಗೆ ಕಾಲಿನಲ್ಲಿ ಊನ ಇರುವ ಕಾರಣ ವಿಶೇಷ ಚೇತನ ವ್ಯಕ್ತಿಯಾದ ಸುಹಾಸ್ ಛಲ ಬಿಡಲಿಲ್ಲ. ಊನ ಇರುವುದೆಲ್ಲ ಒಂದು ಸಮಸ್ಯೆಯೇ ಅಲ್ಲ ಎಂದುಕೊಂಡ ಸುಹಾಸ್ ಕಷ್ಟ ಪಟ್ಟು ಓದಲು ಆರಂಭಿಸಿದ್ದಾರೆ. ಸುಹಾಸ್ ತಂದೆ ಸರ್ಕಾರೀ ಉದ್ಯೋಗಿಯಾಗಿದ್ದರಿಂದ ವಿವಿಧ ಕಡೆ ವರ್ಗಾವಣೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸುಹಾಸ್ ಹಾಸನದ ದುದ್ದ ಬಳಿಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವಾದರೆ, ಶಿವಮೊಗ್ಗದ ಡಿವಿಎಸ್ ಕಾಲೇಜಿನಲ್ಲಿ ಹೈಸ್ಕೂಲು, ಸುರತ್ಕಲ್ನ ಎನ್ಐಟಿಯಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಮಾಡಿದ್ದಾರೆ. ಎಂಜಿನಿಯರ್ ಆಗಿ 3 ವರ್ಷ ಕೆಲಸ ಮಾಡಿದ ಬಳಿಕ ಐಎಎಸ್ ಪರೀಕ್ಷೆ ಬರೆಯುವತ್ತ ಆಸಕ್ತಿ ತೋರಿದ್ದಾರೆ. ಐಎಎಸ್ ಪರೀಕ್ಷೆ ಬರೆದು ಆಯ್ಕೆಯೂ ಆದ್ರು. 2007ರಲ್ಲಿ ಉತ್ತರ ಪ್ರದೇಶ ಕೇಡರ್ನ ಐಎಎಸ್ ಅಧಿಕಾರಿಯಾಗಿ ನೇಮಕವಾದ ಅವರು ಉತ್ತರ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಸುಹಾಸ್ ಅವರ ಪತ್ನಿ ರಿತು ಸಹ ಸಿವಿಲ್ ಸರ್ವೀಸ್ ನಲ್ಲೇ ಇದ್ದಾರೆ.
ಇದನ್ನೂ ಓದಿ: ನೆಲಮಂಗಲ ಟೋಲ್ ನಲ್ಲಿ ಮಾಜಿ ಸೈನಿಕನಿಗೆ ಅಪಮಾನ… ರಾಷ್ಟ್ರ ಧ್ವಜ ಹಿಡಿದು ಮಾಜಿ ಸೈನಿಕರಿಂದ ಪ್ರತಿಭಟನೆ…
ಸುಹಾಸ್ ಅವರು ಮೊದಲ ವಿಶೇಷ ಚೇತನ ಇರುವ ಐಎಎಸ್ ಅಧಿಕಾರಿಯಾಗಿ ಸಾಧನೆ ಮಾಡಿದ್ದಾರೆ. ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಮೊದಲ ಐಎಎಸ್ ಅಧಿಕಾರಿಯೂ ಆಗಿದ್ದಾರೆ. ಸುಹಾಸ್ ಇದೇ ಮೊದಲ ಬಾರಿಗೆ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿ ಪದಕ ಗೆದ್ದಿಲ್ಲ ಬದಲಿಗೆ, 2016ರಲ್ಲಿ ಏಷ್ಯನ್ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪದಕ ಗೆದ್ದ ಭಾರತದ ಮೊದಲ ಐಎಎಸ್ ಅಧಿಕಾರಿಯಾಗಿದ್ದರು. 2016ರಲ್ಲೇ ಚೀನಾದ ಬೀಜಿಂಗ್ನಲ್ಲಿ ನಡೆದ ಏಷ್ಯಾ ಚಾಂಪಿಯನ್ಶಿಪ್ನ ಪ್ಯಾರಾ ಬ್ಯಾಡ್ಮಿಂಟನ್ನಲ್ಲಿ ಚಿನ್ನ ಪದಕ ಗೆದ್ದಿದ್ದಾರೆ. 2017ರಲ್ಲಿ ಬಿಎಂಡಬ್ಲ್ಯೂ ಟರ್ಕಿಶ್ ಓಪನ್ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಪುರುಷರ ಸಿಂಗಲ್ಸ್ ಮತ್ತು ಡಬಲ್ಸ್ ನಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಹಾಗೂ 2018ರಲ್ಲಿ ವಾರಾಣಸಿಯಲ್ಲಿ ನಡೆದ ರಾಷ್ಟ್ರೀಯ ಪ್ಯಾರಾ-ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಚಿನ್ನ ಮುಡಿಗೇರಿಸಿಕೊಂಡಿದ್ದಾರೆ. 2019ರಲ್ಲಿ ಬಿಎಂಡಬ್ಲ್ಯೂ ಟರ್ಕಿಶ್ ಓಪನ್ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಇವರ ಈ ಸಾಧನೆ ಹೀಗೆ ಮುಂದುವರೆಯಲಿ..