ಬೆಂಗಳೂರು: ಸಕ್ಕರೆ ಕಾಯಿಲೆ ಇದ್ದವರು ಪ್ರತಿದಿನ ಸೇವಿಸುವ ಆಹಾರದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕಾಗುತ್ತದೆ. ಒಂದು ಮಾತಿದೆ ಈ ಕಾಯಿಲೆ ಇರುವವರು ಒಂದು ತಿಂದ್ರೆ ಕಡಿಮೆ ಆಗುತ್ತದೆ, ಎರಡು ತಿಂದ್ರೆ ಜಾಸ್ತಿ ಆಗುತ್ತದೆ ಅಂತ.. ಕೆಲವೊಂದು ಆಹಾರ ಪದಾರ್ಥಗಳಲ್ಲಿ ಇವರು ಮಿತಿ ಕಾಯ್ದು ಕೊಳ್ಳಬೇಕಾಗುತ್ತದೆ, ಇನ್ನು ಕೆಲವೊಂದು ಆಹಾರ ಪದಾರ್ಥಗಳನ್ನು ಇವರು ಸಂಪೂರ್ಣವಾಗಿ ಬಿಟ್ಟೇ ಬಿಡಬೇಕಾಗಿ ಬರುತ್ತದೆ.
ಈ ಸಕ್ಕರೆ ಕಾಯಿಲೆ ಎನ್ನುವುದು ದೀರ್ಘಕಾಲ ಕಾಡುವಂತಹ ಒಂದು ಮಾರಕ ಆರೋಗ್ಯ ಸಮಸ್ಯೆಯಾಗಿದೆ. ದೀರ್ಘಾವಧಿಯವರೆಗೆ ಕಾಡುವ ಈ ಕಾಯಿಲೆಯನ್ನು ಸಂಪೂರ್ಣವಾಗಿ ನಿವಾರಿಸಲು ಸಾಧ್ಯವಿಲ್ಲ. ಹೀಗಾಗಿ ವ್ಯಕ್ತಿಯಲ್ಲಿ ಒಮ್ಮೆ ಈ ಕಾಯಿಲೆ ಕಾಣಿಸಿ ಕೊಂಡರೆ, ಜೀವನಪರ್ಯಂತ, ಇದರಿಂದಾಗುವ ಸಮಸ್ಯೆಯನ್ನು ಆತ ಅನುಭವಿಸಬೇಕಾಗುತ್ತದೆ. ಹೀಗಾಗಿ ಈ ಕಾಯಿಲೆ ನಮ್ಮನ್ನು ಆವರಿಸುವ ಮುನ್ನವೇ ಸರಿಯಾದ ಆಹಾರ ಪದ್ಧತಿ ಗಳನ್ನು ಹಾಗೂ ಒಳ್ಳೆಯ ಜೀವನಶೈಲಿಯನ್ನು ಅನುಸರಿಸಿಕೊಂಡು ಹೋದರೆ ಈ ಕಾಯಿಲೆಯಿಂದ ದೂರವಿರಬಹುದು. ಅದಕ್ಕೆ ಏನ್ ಮಾಡಬೇಕು ಅಂತ ಯೋಚನೆ ಮಾಡುತ್ತಿದ್ದೀರಾ ಹಾಗಿದ್ರೆ ಈ ಸ್ಟೋರಿ ಓದಿ..
ಬೆಟ್ಟದ ನೆಲ್ಲಿಕಾಯಿ: ಬೆಟ್ಟದ ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಬೆಟ್ಟದ ನೆಲ್ಲಿಕಾಯಿಯಲ್ಲಿ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳು ಕಂಡು ಬರುವುದರಿಂದ, ಇದನ್ನು ಆಯುರ್ವೇದದಲ್ಲಿ ಹಿಂದಿನಿಂದಲೂ ಕೂಡ ಔಷಧಿ ಯಾಗಿ ಬಳಕೆ ಮಾಡಿಕೊಂಡು ಬರಲಾಗುತ್ತಿದೆ. ಇನ್ನು ವಿಶೇಷವಾಗಿ ಸಕ್ಕರೆ ಕಾಯಿಲೆ ಇರುವವರಿಗೆ ದೇಹದಲ್ಲಿನ ಸಕ್ಕರೆ ಅಂಶದ ಮಟ್ಟವನ್ನು ಸಮತೋಲನಗೊಳಿಸಿ ಇನ್ಸುಲಿನ್ ಪ್ರತಿರೋಧಕ್ಕೆ ಸಹಾಯ ಮಾಡುತ್ತದೆ.
ಮೆಂತ್ಯ ಕಾಳು ಪುಡಿ : ದೇಹಕ್ಕೆ ತಂಪು ಆರೋಗ್ಯಕ್ಕೆ ಹಿತ ಎಂದು ಹೆಸರು ಪಡೆದಿರುವ ಈ ಮೆಂತ್ಯಕಾಳುಗಳು, ಕಹಿಯಾಗಿದ್ದರೂ, ಆರೋಗ್ಯದ ವಿಷಯದಲ್ಲಿ ಮಾತ್ರ ಎತ್ತಿದ ಕೈ ಎಂದರೂ ತಪ್ಪಿಲ್ಲ. ಈ ಪುಟ್ಟ ಕಾಳಿನಲ್ಲಿ ಕರಗುವಂತಹ ನಾರಿನಾಂಶವಿದೆ. ಕೆಟ್ಟ ಕೊಲೆಸ್ಟ್ರಾಲ್‌ನ್ನು ಕಡಿಮೆ ಮಾಡುವಂತಹ ಗುಣಲಕ್ಷಣಗಳು ಕೂಡ ಅಧಿಕ ಪ್ರಮಾಣದಲ್ಲಿ ಕಂಡುಬರುತ್ತದೆ. ಅದೇ ರೀತಿಯಾಗಿ ದೇಹದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುವ ಎಲ್ಲಾ ಆರೋಗ್ಯಕಾರಿ ಅಂಶಗಳು ಇದರಲ್ಲಿ ಕಂಡು ಬರುತ್ತದೆ. ಪ್ರತಿದಿನ, ಒಂದು ಲೋಟ ಬಿಸಿ ನೀರಿಗೆ, ಒಂದು ಟೀ ಚಮಚ ದಷ್ಟು ಮೆಂತೆಕಾಳುಗಳ ಪುಡಿ ಯನ್ನು ಹಾಕಿ ಚೆನ್ನಾಗಿ ಕದಡಿ, ಖಾಲಿಹೊಟ್ಟೆಗೆ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.
ಹಾಗಲಕಾಯಿ ಜ್ಯೂಸ್: ಹಾಗಲಕಾಯಿ ಕಹಿ ತರಕಾರಿ ಎಂದೇ ಪ್ರಸಿದ್ಧಿ ಪಡೆದುಕೊಂಡಿರುವ ತರಕಾರಿ, ಸಕ್ಕರೆ ಕಾಯಿಲೆ ಇರುವವರ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದಕ್ಕಾಗಿ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಅರ್ಧ ಲೋಟ ಹಾಗಲಕಾಯಿ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದು. ಆಯುರ್ವೇದ ಅಂಗಡಿಗಳಲ್ಲಿ ಸಿಗುವ ಹಾಗಲಕಾಯಿ ಪುಡಿಯನ್ನು ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರಿಗೆ ಮಿಕ್ಸ್ ಮಾಡಿ ಬೆಳಗ್ಗೆ ಖಾಲಿ ಹೊಟ್ಟೆಗೆ ಕುಡಿಯುವ ಅಭ್ಯಾಸ ಮಾಡಿ ಕೊಂಡರೆ, ಇದರಿಂದ ಆರೋಗ್ಯದಲ್ಲಿ ಧನಾತ್ಮಕ ಪರಿಣಾಮಗಳು ಉಂಟಾಗಿ, ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಾಯವಾಗುತ್ತದೆ.
ಇದನ್ನೂ ಓದಿ : ಅಖಾಡಕ್ಕೆ ಇಳಿದೇ ಬಿಟ್ರು ಮಹಾರಾಷ್ಟ್ರ ರಾಜ್ಯಪಾಲರು..! ಸರ್ಕಾರದ ಇತ್ತೀಚಿನ ಮಹತ್ವದ ನಿರ್ಧಾರಗಳ ಮಾಹಿತಿ ಕೇಳಿದ ಗವರ್ನರ್..!