ಚಿತ್ರದುರ್ಗ: ಸರ್ಕಾರಕ್ಕೆ ಹಿಂದೂ ಪರ ಸಂಘಟನೆಗಳು ಸೆಡ್ಡು ಹೊಡೆದಿದ್ದು, ಕೋಟೆನಾಡಿಗೆ ಹತ್ತು ಅಡಿಗೂ ಅಧಿಕ ಎತ್ತರದ ಗಣೇಶ ಮೂರ್ತಿಯನ್ನ ತರಲಾಗಿದೆ. ಮಾದಾರ ಚನ್ನಯ್ಯ ಸ್ವಾಮೀಜಿ ಗುರುಪೀಠದಲ್ಲಿ ಮೂರ್ತಿಗೆ ಪೂಜೆ ಮಾಡಲಾಗಿದೆ.
ಹಿಂದೂ ಪರ ಸಂಘಟನೆಗಳು ಸರ್ಕಾರದ ಷರತ್ತುಗಳನ್ನ ಕೇರ್ ಮಾಡದೆ, 10 ಅಡಿಗೂ ಹೆಚ್ಚು ಎತ್ತರದ ಗಣೇಶ ಮೂರ್ತಿಯನ್ನ ತರುವುದರ ಮೂಲಕ ಸರ್ಕಾರದ ನಿಯಮಗಳಿಗೆ ಸೆಡ್ಡು ಹೊಡೆದಿದ್ದಾರೆ. ವಿಶ್ವ ಹಿಂದೂ ಪರಿಷತ್ & ಭಜರಂಗದಳ ನೇತೃತ್ವದಲ್ಲಿ ಚಿತ್ರದುರ್ಗ ನಗರದ ಸೈನ್ಸ್ ಕಾಲೇಜ್ ಮುಂಭಾಗದಲ್ಲಿ ಪ್ರತಿಷ್ಟಾಪನೆ ಮಾಡಲಾಗುತ್ತಿದೆ. ಈ ಬೃಹತ್ ಗಣೇಶ ಮಹಾರಾಷ್ಟ್ರದಿಂದ ಚಿತ್ರದುರ್ಗಕ್ಕೆ ಬಂದಿದ್ದು, ಹಿಂದೂ ಪರ ಸಂಘಟನೆಗಳಿಂದ ಮಹಾಗಣಪತಿ ಮೂರ್ತಿಗೆ ಪೂಜೆ ಸಲ್ಲಿಕೆಯಾಗಿದೆ. ಐದು ಅಡಿಗೂ ಅಧಿಕ ಎತ್ತರದ ಮೂರ್ತಿಯನ್ನ ಪ್ರತಿಷ್ಠಾಪಿಸದಂತೆ ಸರ್ಕಾರ ಆದೇಶಿಸಿತ್ತು, ಆದರೆ ಸರ್ಕಾರದ ಈ ಆದೇಶಕ್ಕೆ ಕಿಮ್ಮತ್ತು ನೀಡದ ಹಿಂದೂ ಪರ ಸಂಘಟನೆಗಳು ಅದ್ದೂರಿಯಾಗಿ ಗಣೇಶೋತ್ಸವ ನಡೆಸಲು ಮುಂದಾಗಿದ್ದಾರೆ.
ಇದನ್ನೂ ಓದಿ:#Flashnews ಗೌರಿ-ಗಣೇಶ ಹಬ್ಬದಂದೇ ಸರ್ಕಾರಿ ನಿವಾಸಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಪ್ರವೇಶ…