ಬೆಂಗಳೂರು: ರಾಜ್ಯ ಸರ್ಕಾರವು ಬಿಬಿಎಂಪಿ ಸಲ್ಲಿಸಿದ್ದ ಡಿ ಲಿಮಿಟೇಷನ್ ವರದಿಯನ್ನು ಅನುಮೋದಿಸಿದೆ. ಈ ಮೂಲಕ ಬಿಬಿಎಂಪಿ ವ್ಯಾಪ್ತಿಯ ವಾರ್ಡ್ ಗಳ ಸಂಖ್ಯೆ 198 ರಿಂದ 243 ಕ್ಕೆ ಏರಿಕೆಯಾಗಿದೆ.
ಜೂನ್ 9 ರಂದು ಬಿಬಿಎಂಪಿ ಡಿ ಲಿಮಿಟೇಷನ್ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿತ್ತು. ಈಗ ರಾಜ್ಯ ಸರ್ಕಾರ ಡಿ ಲಿಮಿಟೇಷನ್ ವರದಿಗೆ ಅನುಮೋದನೆ ನೀಡಿದೆ. ಡಿ ಲಿಮಿಟೇಷನ್ ವರದಿಗೆ ಸಾರ್ವಜನಿಕರ ಆಕ್ಷೇಪ ಇದ್ದರೆ ಕಾರಣ ಸಮೇತ ಆಕ್ಷೇಪ ಹಾಗೂ ಸಲಹೆಗಳನ್ನು ಕೊಡಬಹುದಾಗಿದೆ. ನಗರಾಭಿವೃದ್ಧಿ ಇಲಾಖೆಗೆ 15 ದಿನಗಳ ಒಳಗಾಗಿ ಆಕ್ಷೇಪಣೆ ಅಥವಾ ಸಲಹೆಗಳಿದ್ದರೆ ತಿಳಿಸುವಂತೆ ರಾಜ್ಯ ಸರ್ಕಾರ ಸೂಚಿಸಿದೆ. ಈ ಮೂಲಕ ಬಿಬಿಎಂಪಿ ಚುನಾವಣೆಗೆ ತೊಡಕಾಗಿದ್ದ ಡಿ ಲಿಮಿಟೇಷನ್ ವಿಘ್ನ ನಿವಾರಣೆಯಾದಂತಾಗಿದೆ.