ಬೆಂಗಳೂರು: ಕೊರೋನಾ ಕೊರೋನಾ ಕೊರೋನಾದ ಮಧ್ಯೆ ಥಿಯೇಟರ್ಗಳ ಸೌಂಡ್ ಕಡಿಮೆಯಾಗಿದೆ. ಯಾವಾಗಪ್ಪ ದೊಡ್ಡ ದೊಡ್ಡ ಸಿನಿಮಾ ರಿಲೀಸ್ ಆಗುತ್ತೆ, ಥಿಯೇಟರ್ನಲ್ಲಿ ಶಿಳ್ಳೆ,ಚಪ್ಪಾಳೆ ಸೌಂಡ್ ಯಾವಾಗ ಕೇಳ್ತೀವಿ ಅಂತ ಕನುವರಿಸುತ್ತಿದ ಪ್ರೇಕ್ಷಕರಿಗೆ, ಗುಡ್ ನ್ಯೂಸ್ ಸಿಕ್ಕಿದೆ. ಡಿಸೆಂಬರ್ನಲ್ಲಿ ಸಾಲು ಸಾಲು ಬಿಗ್ ಬಜೆಟ್ ಸಿನಿಮಾ ರಿಲೀಸ್ ಆಗಿ, ಬಾಕ್ಸ್ ಆಫೀಸ್ನಲ್ಲಿ ಸಿನಿಮಾ ವಾರ್ಗೆ ಮುಹೂರ್ತ ಫಿಕ್ಸ್ ಆಗಿದೆ. ಹಾಗಾದ್ರೆ ಈ ವರ್ಷದ ಕೊನೆಯಲ್ಲಿ ರಿಲೀಸ್ ಆಗೋ ಆ ಸಿನಿಮಾಗಳ್ಯಾವುವು..? ಅಂತ ಹೇಳ್ತೀವಿ ಈ ಸ್ಟೋರಿ ಓದಿ..
ಇದನ್ನೂ ಓದಿ: ದೊಡ್ಡ ಗೌಡರ ಮನೆಯಲ್ಲಿ ಅದ್ಧೂರಿ ಸೀಮಂತ ಕಾರ್ಯ…! ಮೊದಲ ಮಗುವಿನ ನಿರೀಕ್ಷೆಯಲ್ಲಿ ನಿಖಿಲ್ ದಂಪತಿ..!
ಡಿಸೆಂಬರ್ನಲ್ಲಿ ಶುರುವಾಗಲ್ಲಿದೆ ಸಿನಿಮಾಗಳ ‘ಭರಾಟೆ’..! ಬಾಕ್ಸ್ ಆಫೀಸ್ ವಾರ್ಗೆ ಮುಹೂರ್ತ ಫಿಕ್ಸ್ ಆಯ್ತಾ..?
ಸಿನಿಮಾ ಲೋಕನೇ ಒಂತರಾ ಕಲರ್ ಫುಲ್.. ಈ ಬಣ್ಣದ ಲೋಕದ ಜಗ್ಗತಿನಲ್ಲಿ ಸಿನಿಮಾಗಳ ಭರಾಟೆ ಸಿಕ್ಕಾಪಟ್ಟೆ ಜೋರು… ಅಂದ್ರಲ್ಲೂ ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳ ಹವಾ ಸಖತ್ ಜೋರು.. ಒಂದೊಳ್ಳೆ ಸಿನಿಮಾ ಬಂದರೆ ಅದರ ಬೆನ್ನಿಗೆ ಇನ್ನಷ್ಟು ಒಳ್ಳೊಳ್ಳೆ ಸಿನಿಮಾಗಳು ಸಾಲು ಸಾಲಾಗಿ ಬರ್ತಿರ್ತಾವೆ. ಕೊರೋನಾದ ಮಧ್ಯೆಯೂ ಈ ವರ್ಷದ ಕೊನೆಯಲ್ಲಿ ಇಂತಹದ್ದೊಂದು ವಿಶೇಷ ವೇದಿಕಯೊಂದನ್ನ ಸ್ಯಾಂಡಲ್ವುಡ್ ಸಜ್ಜು ಮಾಡಿದೆ. ಅರೇ ನಿಜಾನಾ ಅಂದವರು, ಇದನ್ನ ನಂಬಲೇ ಬೇಕು..ಹೌದು ಕನ್ನಡ ಚಿತ್ರರಂಗದಲ್ಲಿ ಡಿಸೆಂಬರ್ ತಿಂಗಳಲ್ಲಿ ಸ್ಟಾರ್ಸ್ ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗಲಿದೆ.
ಇದನ್ನೂ ಓದಿ: ಪ್ಯಾರಾ ನಾರ್ಮಲ್ ತಜ್ಞ ಸ್ಟೀವ್ಹಫ್ ಗೆ ಸಿದ್ಧಾರ್ಥ್ ಶುಕ್ಲಾ ಆತ್ಮ ಹೇಳಿದ್ದೇನು..? ಶುಕ್ಲಾ ಧ್ವನಿ ಕೇಳಿ ಬಿಕ್ಕಿ ಬಿಕ್ಕಿ ಅತ್ತ ಅಭಿಮಾನಿಗಳು..
ಹೊಸ ತೆರೆನಾದ ಸಿನಿಮಾಗಳು ಚಂದನವನದಲ್ಲಿ ಹೊಸ ಭರವಸೆ ಮೂಡಿಸುತ್ತಲೇ ಬಂದಿದೆ. ಹೀಗಿರುವಾಗಲೇ ಗಾಂಧಿನಗರದಲ್ಲಿ ಇದೀಗ ಬಹುನಿರೀಕ್ಷಿತ ಕನ್ನಡ ಸಿನಿಮಾಗಳ ಕಾಲ ಶುರುವಾಗಿದೆ. ಯಾಕಂದ್ರೆ ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾಗಳೆಲ್ಲ ರಿಲೀಸ್ಗೆ ರೆಡಿಯಾಗಿದೆ. ಕೊರೋನಾ, ಲಾಕ್ಡೌನ್, 50% ಅಕ್ಯುಪೆನ್ಸಿ ಇರೋದ್ರಿಂದ ಬಿಗ್ ಬಜೆಟ್ ಸ್ಟಾರ್ ಸಿನಿಮಾಗಳೆಲ್ಲಾ, ಥಿಯೇಟರ್ಗೆ ಲಗ್ಗೆ ಇಡೋದಕ್ಕೆ ಹಿಂದು-ಮುಂದು ನೋಡ್ತಿದ್ವು. ಆದ್ರೆ ಡಿಸೆಂಬರ್ನಲ್ಲಿ ಕೊರೋನಾಕ್ಕೆ ಕೇರ್ ಮಾಡದೇ ಬಿಗ್ ಬಜೆಟ್ ಸಿನಿಮಾಗಳು, ತೆರೆ ಮೇಲೆ ಬಂದೇ ಬರ್ತಿವಿ ಅಂತ ಶಪಥ ಮಾಡಿದೆ. ಹೀಗಾಗಿ ಡಿಸೆಂಬರ್ ತಿಂಗಳ ಸಿನಿವಾರಗಳಲ್ಲಿ ಸ್ಯಾಂಡಲ್ವುಡ್ ಪ್ರೇಕ್ಷಕರು ಫುಲ್ ಬ್ಯುಸಿಯಾಗೋದು ಗ್ಯಾರೆಂಟಿ.
ಗುಮ್ಮ ಬಂದ ಗುಮ್ಮ ಅಂತ ತೆರೆಗೆ ವಿಕ್ರಾಂತ್ ರೋಣ ರೆಡಿ..!
ಕಿಚ್ಚ ಸುದೀಪ್ ನಟನೆಯ ಮೋಸ್ಟ್ ಅವೈಟೆಡ್ ಸಿನಿಮಾ ವಿಕ್ರಾಂತ್ ರೋಣ. ಸೆಟ್ಟೇರಿದ ದಿನದಿಂದಲೂ ಒಂದಲ್ಲ ಒಂದು ವಿಷಯದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿ, ಕೆಲ ಗ್ಲಿಂಪ್ಸ್ ಮೂಲಕ ಪ್ರೇಕ್ಷಕರ ಮನದಲ್ಲಿ ಸಖತ್ ಕ್ಯೂರಿಯಾಸಿಟಿ ಬಿಲ್ಡ್ ಮಾಡಿದ್ದಾರೆ. ಹೀಗಾಗಿ ಪ್ರೇಕ್ಷಕರು ಥಿಯೇಟರ್ನಲ್ಲಿ ರೋಣನ ಅಬ್ಬರ ಯಾವಾಗ ಅಂತ ಲೆಕ್ಕಾಚಾರ ಹಾಕೋ ಟೈಮ್ನಲ್ಲಿಯೇ, ನಾನು ಡಿಸೆಂಬರ್ನಲ್ಲಿ ಮಿಸ್ ಮಾಡದೇ ಬೆಳ್ಳಿ ಪರದೆ ಮೇಲೆ ಘರ್ಜಿಸ್ತಿದ್ದೀನಿ ಅಂತಿದ್ದಾನೆ ವಿಕ್ರಾಂತ್ ರೋಣ.
ಒಬ್ಬೊಬ್ಬರ ಪಾಲಿಗೆ ಒಂದೊಂದು ದಿನ ಲಕ್ಕಿ. ಅದ್ರಲ್ಲೂ ಚಿತ್ರರಂಗದವರಿಗೆ ಕೆಲವೊಂದು ದಿನ ಸಿಕ್ಕಾಪಟ್ಟೆ ಲಕ್ಕಿಯೆಸ್ಟ್ ಡೇ ಆಗಿರುತ್ತದೆ. ಈಗಾಗಲೇ ಸಾಕಷ್ಟು ಸಿನಿಮಾ ಮೂಲಕ ಸಕ್ಸಸ್ ಹಾದಿಯಲ್ಲಿ ಸಾಗುತ್ತಿರುವ ರಕ್ಷಿತ್ ಶೆಟ್ಟಿಗೆ ಆ ತಿಂಗಳು, ಆ ದಿನವೊಂದು ತುಂಬಾ ಲಕ್ಕಿ ಅಂತೆ. ಅರೇ ಯಾವುದು ಅಂತ ಯೋಚನೆ ಮಾಡ್ತಿದ್ದೀರಾ..? ಯೆಸ್ ರಕ್ಷಿತ್ ಶೆಟ್ಟಿಗೆ ಡಿಸೆಂಬರ್ ತಿಂಗಳು ಅಂದ್ರನೇ ತುಂಬಾ ಲಕ್ಕಿ..ಅದ್ರಲೂ ಡಿಸೆಂಬರ್ 30 ರಕ್ಷಿತ್ಗೆ ಮರೆಯಲಾಗದ ದಿನ. ಹೌದು ಡಿಸೆಂಬರ್ 30, 2016 ಕಿರಿಕ್ ಪಾರ್ಟಿ ಸಿನಿಮಾ ರಿಲೀಸ್ ಆಗಿ ಸೂಪರ್ ಹಿಟ್ ಆಗಿತ್ತು. ಈಗ ರಕ್ಷಿತ್ ನಟನೆಯ 777 ಚಾರ್ಲಿ ಸಿನಿಮಾ ಇದೇ ಡಿಸೆಂಬರ್ 31ಕ್ಕೆ ರಿಲೀಸ್ ಆಗಲಿದೆ.
ಡಿಸೆಂಬರ್ನಲೇ ರೋರಿಂಗ್ ಸ್ಟಾರ್ ಅಬ್ಬರ ಶುರುವಾಗುತ್ತಾ..?
ರೋರಿಂಗ್ ಸ್ಟಾರ್ ಶ್ರೀಮುರುಳಿ ‘ಮದಗಜ’, ಪೋಸ್ಟರ್ ಹಾಗೂ ಟೀಸರ್ ಮೂಲಕ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿತ್ತು. ಸದ್ಯ ಬೆಂಗಳೂರು, ಮೈಸೂರು, ವಾರಣಾಸಿ, ಹೈದ್ರಾಬಾದ್ ಸೇರಿದಂತೆ ಕೆಲ ಭಾಗಗಳಲ್ಲಿ ಶೂಟಿಂಗ್ ಕಂಪ್ಲೀಟ್ ಮಾಡಿದ ಚಿತ್ರತಂದ, ಪೋಸ್ಟ್ ಪ್ರೋಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಇದರ ನಡುವೆಯೇ ಮದಗಜ ಪ್ರಿಯರಿಗೆ ಸಿಹಿ ಸುದ್ದಿಯನ್ನ ಸಹ ನೀಡಿದೆ. ಹೌದು ಶ್ರೀಮುರುಳಿ ಹಾಗೂ ಆಶಿಕಾ ರಂಗನಾಥ್ ನಟಿಸಿರುವ ಮದಗಜ ಸಿನಿಮಾ, ಇದೇ ಡಿಸೆಂಬರ್ನಲ್ಲಿ ತೆರೆ ಮೇಲೆ ರಾರಾಜಿಸಲಿದಿಯಂತೆ..
ಹೊಸ ದಾಖಲೆಗೆ ಸಜ್ಜಾದ ಕನ್ನಡ ಚಿತ್ರರಂಗ..! ಪರಭಾಷಾ ಸಿನಿಮಾಗಳನ್ನ ಮೀರಿಸುತ್ತಾ ಸ್ಯಾಂಡಲ್ವುಡ್..?
ಕೊರೋನಾದ ನಡುವೆಯೂ ಡಿಸೆಂಬರ್ನಲ್ಲಿ ಮುಹೂರ್ತ ಫಿಕ್ಸ್ ಮಾಡಿದ ಸ್ಟಾರ್ ಸಿನಿಮಾಗಳು, ತೆರೆ ಮೇಲೆ ಅಬ್ಬರಸಿ ಬಾಕ್ಸ್ ಆಫೀಸ್ನಲ್ಲಿ ವಾರ್ ಶುರು ಮಾಡೋದು ಪಕ್ಕಾ ಆಗಿದೆ. ಒಟ್ನಲ್ಲಿ ಡಿಸೆಂಬರ್ ತಿಂಗಳಲ್ಲಿ ಪರಭಾಷೆ ಸಿನಿಮಾಗಳನ್ನ ಹಿಂದಿಕ್ಕಿ ,ಸಿನಿಮಾ ರೇಸ್ನಲ್ಲಿ ಮೊದಲ ಸ್ಥಾನದಲ್ಲಿ ಸ್ಯಾಂಡಲ್ವುಡ್ ಸಖತ್ ಸೌಂಡ್ ಮಾಡುವುದರ ಜೊತೆಗೆ ಪ್ರೇಕ್ಷಕರಿಗೆ ಒಳ್ಳೆಯ ಎಂಟರ್ಟೈನ್ಮೆಂಟ್ ಕೊಡುತ್ತಾ ಅಂತ ಕಾದು ನೋಡಬೇಕಾಗಿದೆ.