ವಿಜಯಪುರ: ಎಸ್ ಎಸ್ ಎಲ್ ಸಿ ಮೌಲ್ಯ ಮಾಪನ ವೇಳೆ ಅಚ್ಚರಿ ಉತ್ತರ ಪತ್ರಿಕೆ ಸಿಕ್ಕಿದ್ದು, ನನ್ನನ್ನು ಪಾಸ್ ಮಾಡಿ.. ದೇವರು ನಿಮಗೆ ಒಳ್ಳೆಯದು ಮಾಡುತ್ತಾರೆ ಅಂತ SSLC ವಿದ್ಯಾರ್ಥಿ ಆನ್ಸರ್ಶೀಟ್ನಲ್ಲಿ ಪಾಸ್ ಮಾಡುವಂತೆ ಬೇಡಿಕೊಂಡಿದ್ದಾನೆ.
ವಿಜಯಪುರದ ಸ್ನೇಹ ಸಂಗಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮೌಲ್ಯಮಾಪನದ ವೇಳೆ ಈ ಉತ್ತರ ಪತ್ರಿಕೆ ಸಿಕ್ಕಿದ್ದು, ಪರೀಕ್ಷೆಯಲ್ಲಿ ಪಾಸ್ ಮಾಡುವಂತೆ ಉತ್ತರ ಪತ್ರಿಕೆಯಲ್ಲೆ ಸಾಷ್ಟಾಂಗ ನಮಸ್ಕಾರವನ್ನು ಪರೀಕ್ಷಾರ್ಥಿ ಹಾಕಿದ್ದು, ತನ್ನನ್ನ ಪಾಸ್ ಮಾಡುವಂತೆ ಪತ್ರಿಕೆಯಲ್ಲಿ ಪರೀಕ್ಷಾರ್ಥಿ ಮನವಿ ಮಾಡಿಕೊಂಡಿದ್ದಾನೆ. ಸಿದ್ದರಾಮೇಶ್ವರ ಪ್ರೌಢ ಶಾಲೆಯ ಶಿಕ್ಷಕ ಸಿದ್ದಪ್ಪ ಅಂಬಳನೂರು ಮೌಲ್ಯಮಾಪನ ವೇಳೆಯಲ್ಲಿ ಉತ್ತರ ಪತ್ರಿಕೆ ಸಿಕ್ಕಿದೆ.