ಮಂಡ್ಯ : ಶ್ರೀರಂಗಪಟ್ಟಣಕ್ಕೆ ಕಾವೇರಿ ಪ್ರವಾಹ ಸಂಕಷ್ಟದಿಂದಿದ್ದು, ಕೆಆರ್ಎಸ್ ಭರ್ತಿಯಿಂದ ಉಕ್ಕಿ ಹರಿಯುತ್ತಿರುವ ಕಾವೇರಿ. ಶ್ರೀರಂಗಪಟ್ಟಣದ ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತಿದೆ. ಪ್ರಮುಖ ಧಾರ್ಮಿಕ ಕೇಂದ್ರ ಘೋಸಾಯ್ ಘಾಟ್ ಜಲಾವೃತವಾಗಿದೆ.
ಹಲವು ದೇಗುಲ ಸೇರಿ ಅಂಗಡಿ ಮಳಿಗೆಗಳಿಗೆ ನೀರು ನುಗ್ಗಿದೆ. ಘೋಸಾಯ್ ಘಾಟ್ ಬಳಿ ಇದ್ದ ಪಂಪ್ ಹೌಸ್ ಮುಳುಗಡೆಯಾಗಿದೆ. ಪಂಪ್ ಹೌಸ್ ಮುಳುಗಿ ಗಂಜಾಮ್ಗೆ ನೀರು ಸರಬರಾಜು ಸ್ಥಗಿತ ಮಾಡಲಾಗಿದೆ. ಘೋಸಾಯ್ ಘಾಟ್ಗೆ ಸ್ಥಳೀಯರು ಹಾಗೂ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಕಾವೇರಿ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಕಾಶಿ ವಿಶ್ವನಾಥ ದೇಗುಲ ಸಂಪೂರ್ಣ ಜಲಾವೃತವಾಗಿದೆ.
ಇದನ್ನೂ ಓದಿ : ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ತುಂಗಭದ್ರಾ..! 1 ಲಕ್ಷ ಕ್ಯೂಸೆಕ್ಗೂ ಹೆಚ್ಚು ನೀರು ನದಿಗೆ ರಿಲೀಸ್..!