ಬೆಂಗಳೂರು : ಸ್ಯಾಂಟ್ರೋ ರವಿ ಲೀಲೆ ಪತ್ತೆಗೆ ಸ್ಪೆಷಲ್ ಟೀಂ ರೆಡಿಯಾಗಿದೆ. ಅವ್ಯವಹಾರ, ಅಕ್ರಮಗಳ ಇಂಚಿಂಚೂ ತನಿಖೆಗೆ ಟೀಂ ರೆಡಿಯಾಗಿದೆ.
CIDಯ ಮೂರು ತಂಡಗಳಿಂದ ಪ್ರತ್ಯೇಕ ಆಯಾಮಗಳಲ್ಲಿ ತನಿಖೆ ನಡೆಯುತ್ತಿದ್ದು. ಸ್ಯಾಂಟ್ರೋ ರವಿ ಪತ್ನಿ ದೂರು ಹಾಗೂ ಇತರೆ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಸಿಸಿಬಿ ಪೊಲೀಸರು ಕಾಟನ್ ಪೇಟೆ ಠಾಣೆ ಕೇಸ್ನ ಮಾಹಿತಿ ಪಡೆದಿದ್ದಾರೆ.
ಸ್ಯಾಂಟ್ರೋ ರವಿ ಪತ್ನಿ ಮೇಲೆ ಬೋಗಸ್ ಕೇಸ್ ಹಾಕಿದ ಆರೋಪವಿದ್ದು, ಸಿಐಡಿ ಮೈಸೂರು ಕೇಸ್ನಲ್ಲೂ ಈಗಾಗಲೇ ಎಲ್ಲಾ ಮಾಹಿತಿ ಪಡೆದಿದ್ದಾರೆ. DySP ಅಂಜುಮಾಲಾ ನಿನ್ನೆ ಸ್ಯಾಂಟ್ರೋ 2ನೇ ಪತ್ನಿಯ ವಿಚಾರಣೆ ಮಾಡಿದ್ದರು. DySP ನರಸಿಂಹಮೂರ್ತಿ ಜಾತಿ ನಿಂದನೆ ಪ್ರಕರಣ ಸಂಬಂಧ ತನಿಖೆ ನಡೆಸಿದ್ದು, ಸ್ಯಾಂಟ್ರೋ ರವಿ ಜೊತೆ ಯಾವೆಲ್ಲಾ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ, ಸ್ಯಾಂಟ್ರೋ ರವಿ ಮತ್ತು ಅಧಿಕಾರಿಗಳ ನಡುವಿನ ಸಂಬಂಧ ಎಂಥದ್ದು, ಸ್ಯಾಂಟ್ರೋ ರವಿ ಮೊಬೈಲ್ ರಿಟ್ರೀವ್ ಮಾಡಿ ಮಾಹಿತಿ ಸಂಗ್ರಹಿಸಿದ್ದಾರೆ. ಹಿರಿಯ ಅಧಿಕಾರಿಗಳ ಗ್ರೀನ್ ಸಿಗ್ನಲ್ಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ. ಸ್ಯಾಂಟ್ರೋ ರವಿ ಮೇಲಿನ ಒಂದೊಂದು ಆರೋಪದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ರಾಜಕಾರಣಿಗಳ ಬುಡಕ್ಕೆ ಬರುತ್ತಾ ಸ್ಯಾಂಟ್ರೋ ಪತ್ನಿ ಕೊಟ್ಟ ಮಾಹಿತಿ..? ಕೀಚಕ ಸ್ಯಾಂಟ್ರೋ ರವಿ ಕೈಗೆ ಸಿಲುಕಿ ಒದ್ದಾಡಿದ್ದ ಪತ್ನಿಯ ಸ್ಪೋಟಕ ಮಾಹಿತಿಯಾಗಿದೆ. ಸಿಐಡಿ ಶೇಷಾದ್ರಿಪುರಂನ ವಾಹಬ್ ಅಪಾರ್ಟ್ಮೆಂಟ್ನಲ್ಲಿ ಮಹಜರ್ ಮಾಡಿಸಿದ್ದಾರೆ. ಇದೇ ಪ್ಲ್ಯಾಟ್ನಲ್ಲಿ ಸ್ಯಾಂಟ್ರೋ ತನ್ನ ಪತ್ನಿಗೆ ಟಾರ್ಚರ್ ನೀಡಿದ್ದನಂತೆ. IAS ಅಧಿಕಾರಿಯೊಬ್ಬರ ಜೊತೆ ಹಾಸಿಗೆ ಹಂಚಿಕೊಳ್ಳುವಂತೆ ಟಾರ್ಚರ್ ನೀಡಿದ್ದು, ಹತ್ತಾರು ಯುವತಿಯರನ್ನ ಕರೆಸಿ ವೇಶ್ಯಾವಾಟಿಕೆ ಅಡ್ಡೆ ಮಾಡಿಕೊಂಡಿದ್ದ ಆರೋಪವಿದೆ. ಸ್ಯಾಂಟ್ರೋ ರವಿ ಖಾಸಗಿ ಹೋಟೆಲ್ನಲ್ಲಿ ಭೇಟಿಯಾಗಿದ್ದ ಪ್ರತಿಷ್ಠಿತರಿಗೂ ಸಂಕಷ್ಟ ಎದುರಾಗಿದ್ದು, ಸಿಐಡಿ ಟೀಂ ಸಿಸಿಟಿವಿ ದೃಶ್ಯಾವಳಿ ಕಲೆ ಹಾಕಿ ತನಿಖೆಗೆ ಮುಂದಾಗಿದ್ದಾರೆ.